Friday, August 12, 2022

Latest Posts

ನವೆಂಬರ್ 1ರಿಂದ ದೆಹಲಿಯಲ್ಲಿ ಶಾಲಾ ಕಾಲೇಜುಗಳು ಆರಂಭ: ಮನೀಶ್ ಸಿಸೋಡಿಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ನವೆಂಬರ್ 1ರಿಂದ ಪುನರಾರಂಭಿಸಲು ಮತ್ತು ಕೋವಿಡ್‌ ಮಾರ್ಗಸೂಚಿಯೊಂದಿಗೆ ಛತ್ ಪೂಜೆ ಆಚರಣೆಗೆ ಅನುಮತಿ ನೀಡಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬುಧವಾರ ತಿಳಿಸಿದ್ದಾರೆ.
ಪ್ರಾಧಿಕಾರದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ.1ರಿಂದ ಶಾಲಾ, ಕಾಲೇಜುಗಳು ಆರಂಭವಾಗಲಿವೆ. ಶಾಲೆಗಳಲ್ಲಿ ಭೌತಿಕ ತರಗತಿಗಳ ಜೊತೆಗೆ, ಆನ್‌ಲೈನ್ ತರಗತಿಗಳನ್ನು ಮುಂದುವರಿಸುವಂತೆ ಸೂಚಿಸಲಾಗಿದೆ’ ಎಂದರು.
‘ಶೇ 50ರಷ್ಟು ಮಕ್ಕಳಿಗೆ ಶಾಲೆಗಳಿಗೆ ಬರುವಂತೆ ಸೂಚಿಸಬೇಕು. ಆದರೆ ಪೋಷಕರಿಗೆ ಯಾವುದೇ ಒತ್ತಡ ಹೇರಬಾರದು. ಎಲ್ಲ ಶಿಕ್ಷಕರು ಕಡ್ಡಾಯವಾಗಿ ಎರಡೂ ಡೋಸ್‌ಗಳನ್ನು ಪಡೆದಿರಬೇಕು. ಲಸಿಕೆ ಹಾಕಿಸದವರು ಆದಷ್ಟು ಬೇಗ ಹಾಕಿಸಿಕೊಳ್ಳಬೇಕು ‘ ಎಂದು ತಿಳಿಸಿದರು.
ಸದ್ಯಕ್ಕೆ ದೆಹಲಿಯಲ್ಲಿ ಕೋವಿಡ್‌ ಸೊಂಕು ನಿಯಂತ್ರಣದಲ್ಲಿದೆ. ಆದರೂ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಎಲ್ಲ ರೀತಿಯ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಅವರು ಮನವಿ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss