ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟುವ ಮೂಲಕ ದೆಹಲಿಯ ಶಾಲಾ ಮಕ್ಕಳು ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಶಾಲೆಗೆ ತೆರಳಿ, ಅಲ್ಲಿ ಶಾಲಾ ವಿದ್ಯಾರ್ಥಿನಿಯರಿಂದ ರಾಖಿ ಕಟ್ಟಿಸಿಕೊಳ್ಳುವ ಮೂಲಕ ಸಂಭ್ರಮದಿಂದ ರಕ್ಷಾ ಬಂಧನ ಹಬ್ಬವನ್ನು ಆಚರಣೆ ಮಾಡಿದ್ದಾರೆ.
ಅಲ್ಲದೆ ರಕ್ಷಾ ಬಂಧನ ಹಬ್ಬದ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, “ನನ್ನ ಎಲ್ಲಾ ಕುಟುಂಬ ಸದಸ್ಯರಿಗೆ ರಕ್ಷಾಬಂಧನದ ಶುಭಾಶಯಗಳು. ರಕ್ಷಾಬಂಧನ ಒಂದು ಪವಿತ್ರ ಹಬ್ಬ, ಅಕ್ಕ-ತಂಗಿಯರ ನಡುವಿನ ಅವಿನಾಭಾವ ನಂಬಿಕೆ ಮತ್ತು ಆಳವಾದ ಪ್ರೀತಿಗೆ ಈ ದಿನ ಸಮರ್ಪಿತವಾಗಿದೆ. ಇದು ನಮ್ಮ ಸಂಸ್ಕೃತಿಯ ಪವಿತ್ರ ಪ್ರತಿಬಿಂಬವಾಗಿದೆ. ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ, ಸೌಹಾರ್ದತೆ ಮತ್ತು ಸೌಹಾರ್ದತೆಯ ಮನೋಭಾವವನ್ನು ಆಳವಾಗಿ ಬೀರಲಿ ಎಂಬುದು ನನ್ನ ಆಶಯ” ಎಂದು ಶುಭಾಶಯ ತಿಳಿಸಿದ್ದಾರೆ.