Thursday, August 11, 2022

Latest Posts

ಸ್ಕೂಟಿ – ಬಸ್ ಡಿಕ್ಕಿ: ತಲೆ ಮೇಲೆ ಬಸ್ ಹರಿದು ಬಾಲಕಿ ಸಾವು

ಹೊಸ ದಿಗಂತ ವರದಿ, ಕೊಪ್ಪಳ:

ಸ್ಕೂಟಿ – ಬಸ್ ನಡುವೆ ಡಿಕ್ಕಿಯಿಂದ ಸ್ಕೂಟಿ ಚಲಾಯಿಸುತ್ತಿದ್ದ ಬಾಲಕಿ ಕೆಳಗೆ ಬಿದ್ದ ಸ್ಕೂಟಿ ಚಾಲನೆ ಮಾಡುತ್ತಿದ್ದ ಬಾಲಕಿಯ ತಲೆ ಮೇಲೆ ಬಸ್ ಹರಿದಿದ್ದರಿಂದ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಕಿನ್ನಾಳದ ದೇವಲಾಪೂರದ ಬಳಿ ಭಾನುವಾರ ಘಟನೆ ನಡೆದಿದೆ.
ಮೃತ ದುರ್ದೈವಿಯನ್ನು ನೇಹಾ ಶೆಡದ್(16) ಎಂದು ಗುರುತಿಸಲಾಗಿದೆ .
ತೇಜಸ್ವಿನಿ , ಗೌರಿ ತುಪ್ಪದ ಗಂಭೀರವಾಗಿ ಗಾಯಗೊಂಡ ಬಾಲಕಿಯರು ಎಲ್ಲರೂ ಭಾಗ್ಯನಗರದ ನ್ಯಾಷನಲ್ ಸ್ಕೂಲ್ ನಲ್ಲಿ 9 ನೇ ತರಗತಿ ಓದುತ್ತಿದ್ದ ಬಾಲಕಿಯರು . ಕಿನ್ನಾಳ ಡ್ಯಾಂ ಗೆ ಬರ್ತಡೇ ಸೆಲೆಬ್ರೆಷನ್ ಗಾಗಿ ತೆರಳಿದ್ದರು.ವಾಪಸ್ ಬರುವಾಗ ದುರ್ಘಟನೆ ನಡೆದಿದ್ದು ಗಂಭೀರವಾಗಿ ಗಾಯಗೊಂಡ ಬಾಲಕಿಯರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ .
ಪರಾರಿಯಾಗಿದ್ದ ಬಸ್ ಚಾಲಕನನ್ನು ಅರೆಸ್ಟ್ ಮಾಡಲಾಗಿದ್ದು ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ .
ಹಂಪ್ ನಿಂದಾಗಿ ಈ ದುರ್ಘಟನೆ ನಡೆದಿದೆ ಎಂದೂ ಹೇಳಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss