Friday, July 1, 2022

Latest Posts

ಸ್ಕೋರ್ಪಿಯೋ ವಾಹನ ಪಲ್ಟಿ: ಇಬ್ಬರು ಸ್ಥಳದಲ್ಲಿಯೇ ಸಾವು

ಹೊಸ ದಿಗಂತ ವರದಿ, ಕಾರವಾರ:

ಸ್ಕೋರ್ಪಿಯೋ ವಾಹನ ಪಲ್ಟಿ ಯಾಗಿ ಇಬ್ಬರು ಸ್ಥಳದಲ್ಲಿಯೇ ಮೃತ ಪಟ್ಟು 6 ಜನರಿಗೆ ಗಾಯಗಳಾದ ಘಟನೆ ಇಲ್ಲಿಗೆ ಸಮೀಪದ ಕದ್ರಾ ಭೈರೆ ಕ್ರಾಸ್ ಬಳಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಮೃತರನ್ನು ಬೆಂಗಳೂರು ವಿದ್ಯಾರಣ್ಯಪುರದ ಚಾಲಕ ಸೈಯ್ಯದ್ ಮುನೀರ್ (35) ಮತ್ತು ತಾಯವ್ವ (37) ಎಂದು ಗುರುತಿಸಲಾಗಿದೆ.
ಬೆಂಗಳೂರು ಮೂಲದ ಇವರು ಕಾರವಾರ ಸಮೀಪದ ಹಳಗಾದ ಪಾರ್ಶ್ವವಾಯು ಚಿಕಿತ್ಸಾ ಕೇಂದ್ರದಲ್ಲಿ ವ್ಯಕ್ತಿಯೋರ್ವರಿಗೆ ಚಿಕಿತ್ಸೆ ನೀಡಿ ಬೆಂಗಳೂರಿಗೆ ಮರಳುವಾಗ ಸ್ಕೋರ್ಪಿಯೋ ವಾಹನ ಪಲ್ಟಿಯಾಗಿದೆ ಈ ಕುರಿತಂತೆ ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss