ಮಧ್ಯರಾತ್ರಿ ನದಿಯಲ್ಲಿ ಸಿಲುಕಿದ ವ್ಯಕ್ತಿಯನ್ನು ರಕ್ಷಿಸಿದ ರೋಚಕ ವಿಡಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರಾಖಂಡದಲ್ಲಿ ಭೋರ್ಗರೆಯುತ್ತಿರುವ ನದಿಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬನನ್ನು ರಕ್ಷಿಸಿರುವ ರೋಚಕ ವಿಡಿಯೋ ವಿಡಿಯೋ ವೈರಲ್‌ ಆಗಿದೆ. ಪೌರಿ ಗರ್ವಾಲ್ ಜಿಲ್ಲೆಯ ಯಂತ್ರತಪ್ಪು ಬಳಿ ರಕ್ಕಸವಾಗಿ ಹರಿಯುತ್ತಿರುವ ನೀರಿನಲ್ಲಿ ಒಬ್ಬ ವ್ಯಕ್ತಿ ತನ್ನ ಕಾರಿನೊಂದಿಗೆ ಸಿಲುಕಿಕೊಂಡಿದ್ದಾನೆ. ಅದಾಗಲೇ ತಡರಾತ್ರಿ ಎತ್ತ ನೋಡಿದರೂ ಕತ್ತಲೆಯೇ ಆವರಿಸಿದೆ. ಅದು ಹೇಗೋ ಕಾರಿನ ಮೇಲೆ ಹತ್ತಿ ಜೋರಾಗಿ ಅಳತೊಡಗಿದ.

ಅಳುವಿನ ಶಬ್ದ ಕೇಳಿದ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ವ್ಯಕ್ತಿಯನ್ನು ರಕ್ಷಿಸಲು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್)ಗೆ ಕರೆಸಲಾಯಿತು. SDRF ನ ತಂಡವು ವಿಶೇಷ ಕಾರ್ಯಾಚರಣೆ ನಡೆಸಿ ಮಧ್ಯರಾತ್ರಿ ಕಾರಿನೊಂದಿಗೆ ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ರಕ್ಷಿಸಿದರು.

55 ಸೆಕೆಂಡುಗಳ ವೀಡಿಯೊದಲ್ಲಿ, ವ್ಯಕ್ತಿ ತನ್ನ ಕಾರಿನ ಮೇಲೆ ಕುಳಿತಿರುವುದನ್ನು ಕಾಣಬಹುದು. ಹಗ್ಗಗಳ ಮೂಲಕ ವ್ಯಕ್ತಿ ಬಳಿ ತೆರಳಿದ ತಂಡ ನೀರಿನಲ್ಲಿ ಸಿಲುಕಿದ್ದ ವ್ಯಕ್ತಿಗೆ ಲೈಫ್ ಜಾಕೆಟ್ ನೀಡಿ ನದಿಯಿಂದ ಹೊರ ತರಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!