ಗ್ಯಾನವಾಪಿ ಮಸೀದಿಯಲ್ಲಿ ಎರಡನೇ ದಿನದ ಸಮೀಕ್ಷೆ: ಹೆಚ್ಚಿದ ಭದ್ರತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಹುಚರ್ಚಿತ ಗ್ಯಾನವಾಪಿ ಮಸೀದಿಯಲ್ಲಿ ಇಂದು ಎರಡನೇ ದಿನದ ಸರ್ವೇ ಕಾರ್ಯ ನಡೆಯಲಿದ್ದು ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ.

ಇಂದು ಸ್ವಯಂಭೂ ವಿಶ್ವನಾಥ ದೇವಾಲಯದ ಭಾಗವೆಂದು ಹೇಳಲಾಗಿರುವ ಮಸೀದಿಯ ಭಾಗಗಳಲ್ಲಿ ಸರ್ವೇ ಕಾರ್ಯ ನಡೆಯಲಿದೆ. ನ್ಯಾಯಾಲಯ ನೇಮಿಸಿದ ಸಮಿತಿಯು ಎರಡನೇ ದಿನವೂ ಸರ್ವೇ ಕಾರ್ಯ ಮುಂದುವರೆಸಿರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು ವಕೀಲರು ಮತ್ತು ಹಿಂದೂ ಮುಖಂಡರು ಸ್ಥಳಕ್ಕೆ ಆಗಮಿಸಿದ್ದಾರೆ.

ಗ್ಯಾನವಾಪಿ ಸಂಕೀರ್ಣದ ಪಶ್ಚಿಮ ಗೋಡೆಗಳಲ್ಲಿ ಇಂದಿಗೂ ಹಿಂದೂ ದೇವಾಲಯದ ಅವಶೇಷಗಳು ಗೋಚರಿಸುತ್ತಾದೆ ಎನ್ನಲಾಗಿದೆ. ಇದಕ್ಕಾಗಿ ಇಂದು ನಾಲ್ಕನೇ ಬೀಗವನ್ನು ತೆರೆಯಲಾಗಿದ್ದು ನಿನ್ನೆ ಸಮೀಕ್ಷೆ ನಡೆಸುವ ವೇಳೆ ಮೂರು ಬೀಗಗಳನ್ನು ತೆರೆಯಲಾಗಿತ್ತು. ಹಿಂದೂ ಪರ ವಕೀಲರು ಹೇಳುವಂತೆ, ಇಲ್ಲಿಯವರೆಗೆ ಜನರಿಗೆ ತಿಳಿದಿಲ್ಲದ ಅನೇಕ ವಿಷಯಗಳು ನಿನ್ನೆ ಸಮೀಕ್ಷೆಯಲ್ಲಿ ಬಹಿರಂಗವಾಗಿವೆ.

ಸಮೀಕ್ಷೆಯು ಪೂರ್ಣಗೊಂಡು ಮೇ17 ರಂದು ವರದಿ ಸಲ್ಲಿಕೆಯಾಗುವ ಸಾಧ್ಯತೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!