ಎರಡನೇ ಬಾರಿ ಅತಿಹೆಚ್ಚು ಜಿಎಸ್‌ಟಿ ಸಂಗ್ರಹ: ಜುಲೈ ತೆರಿಗೆ ಸಂಗ್ರಹದಲ್ಲಿ 28% ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜುಲೈನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹಣೆಗಳು ವರ್ಷದಿಂದ ವರ್ಷಕ್ಕೆ (y-o-y) 28 ಶೇಕಡಾ ಜಿಗಿತ ಕಂಡಿದ್ದು ಒಟ್ಟೂ 1,48,995 ಕೋಟಿ ರೂ. ಸಂಗ್ರಹವಾಗಿದೆ. ಇದು ಇಲ್ಲಿಯವರೆಗಿನ ಎರಡನೇ ಅತಿ ಹೆಚ್ಚು GST ಆದಾಯ ಸಂಗ್ರಹವಾಗಿದೆ.

ಜುಲೈ 2022 ರಲ್ಲಿ ಸಂಗ್ರವಾದ ಜಿಎಸ್‌ಟಿ ತೆರಿಗೆಗಳು ಎಪ್ರಿಲ್ 2022 ರ ನಂತರ ಸಂಗ್ರಹವಾದ ಎರಡನೇ ಅತಿ ದೊಡ್ಡ ಮೊತ್ತವಾಗಿದೆ. ಜೂನ್‌ ನಲ್ಲಿ 1,44,616 ಕೋಟಿ ರೂ. ಸಂಗ್ರಹವಾಗಿತ್ತು. ಜಿಎಸ್‌ಟಿ ಪ್ರಾರಂಭವಾದಾಗಿನಿಂದ ಮಾಸಿಕ ಜಿಎಸ್‌ಟಿ ಸಂಗ್ರಹಗಳು ರೂ 1.40-ಲಕ್ಷ-ಕೋಟಿ ಗಡಿಯನ್ನು ದಾಟಿದ್ದು ಇದು ಆರನೇ ಬಾರಿಯಾಗಿದೆ.

“ಜುಲೈ 2022 ರಲ್ಲಿ ಒಟ್ಟು GST ಆದಾಯವು 1,48,995 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ, ಇದರಲ್ಲಿ CGST 25,751 ಕೋಟಿ ರೂಪಾಯಿಗಳು, SGST 32,807 ಕೋಟಿ ರೂಪಾಯಿಗಳು, IGST 79,518 ಕೋಟಿ ರೂಪಾಯಿಗಳು, ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ ತೆರಿಗೆಯನ್ನೂ ಒಳಗೊಂಡಂತೆ 10,920 ಕೋಟಿ ಸಂಗ್ರಹವಾಗಿದೆ” ಜಿಎಸ್‌ಟಿ ಜಾರಿಯಾದ ನಂತರ ಇದು ಎರಡನೇ ಅತಿ ಹೆಚ್ಚು ಆದಾಯವಾಗಿದೆ ಎಂದು ಹಣಕಾಸು ಸಚಿವಾಲಯ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

ಸರ್ಕಾರವು ಐಜಿಎಸ್‌ಟಿಯಿಂದ ಸಿಜಿಎಸ್‌ಟಿಗೆ 32,365 ಕೋಟಿ ಮತ್ತು ಎಸ್‌ಜಿಎಸ್‌ಟಿಗೆ 26,774 ಕೋಟಿ ರೂ. ಇತ್ಯರ್ಥಗೊಳಿಸಿದೆ. ಇದರ ನಂತರ ಜುಲೈ 2022 ರಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು CGST ಗಾಗಿ 58,116 ಕೋಟಿ ಮತ್ತು SGST ಗಾಗಿ 59,581 ಕೋಟಿ ರೂ. ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!