ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಾಳೆಯಿಂದ ಕನ್ನಡ ಬಿಗ್​ಬಾಸ್ ಸೀಸನ್ 8 ರ ಸೆಕೆಂಡ್ ಇನಿಂಗ್ಸ್ ಶುರು!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಸಂಕಷ್ಟದಿಂದ ಸ್ಥಗಿತಗೊಂಡಿದ್ದ ಕನ್ನಡ ಬಿಗ್​ಬಾಸ್ ಸೀಸನ್ 8 ನಾಳೆಯಿಂದ ಮತ್ತೆ ಆರಂಭವಾಗುತ್ತಿದ್ದು, ನಟ ಸುದೀಪ್ ಬುಧವಾರ ಸಂಜೆ 6 ಗಂಟೆಗೆ ಕಾರ್ಯಕ್ರಮವನ್ನು ನಿರೂಪಿಸುವುದರ ಮೂಲಕ ಸೆಕೆಂಡ್ ಇನ್ನಿಂಗ್ಸ್​ಗೆ ಚಾಲನೆ ನೀಡಲಿದ್ದಾರೆ.
ಸಾಮಾನ್ಯವಾಗಿ ಬಿಗ್​ಬಾಸ್ ರಿಯಾಲಿಟಿ ಶೋ 100 ದಿನಗಳ ಕಾಲ ನಡೆಯಲಿದೆ. ಆದರೆ, 75 ದಿನಕ್ಕೆ ರದ್ದಾಗಿದ್ದ ಕಾರಣ ಇನ್ನುಳಿದ 25 ದಿನಗಳ ಕಾಲದ ಶೂಟಿಂಗ್ ಬಾಕಿ ಇದೆ. ಆದರೆ, 25 ದಿನಗಳ ಕಾಲ ನಡೆಸಿದರೆ ಪ್ರೇಕ್ಷಕರಿಗೆ ಪೂರ್ಣಪ್ರಮಾಣದ ಮನರಂಜನೆ ಸಿಗುವುದಿಲ್ಲ. ಹೀಗಾಗಿ, ವಾಹಿನಿಯ ಮೂಲಗಳ ಪ್ರಕಾರ ಎರಡು ತಿಂಗಳ ಕಾಲ ಅಥವಾ 50 ದಿನಗಳು ರಿಯಾಲಿಟಿ ಶೋ ನಡೆಸಲು ವಾಹಿನಿ ಸಿದ್ಧವಾಗಿದೆ.
ಈಗಾಗಲೇ 12 ಮಂದಿ ಸ್ಪರ್ಧಿಗಳು ಕ್ವಾರಂಟೈನ್​ನಲ್ಲಿದ್ದಾರೆ. ಬುಧವಾರ ಸಂಜೆ ಅಧಿಕೃತವಾಗಿ ಮನೆ ಪ್ರವೇಶಿಸಲಿದ್ದಾರೆ. ನಟ ಸುದೀಪ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದು, ನಾಳೆಯಿಂದ ಬಿಗ್​ಬಾಸ್ ಸೀಸನ್ 8 ಪುನಾರಂಭವಾಗಲಿದೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss