spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, October 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮರು ಅವಕಾಶ: ದ್ವಿತೀಯ ಪಿಯುದಲ್ಲಿ ಶೇ.29.91 ರಷ್ಟು ವಿದ್ಯಾರ್ಥಿಗಳು ಪಾಸ್

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಆಗಸ್ಟ್ ಹಾಗೂ ಸೆಪ್ಟೆಂಬರ್ 2021ರ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದೆ. ಪರೀಕ್ಷೆ ಬರೆದಿದ್ದ 592 ವಿದ್ಯಾರ್ಥಿಗಳ ಫಲಿತಾಂಶ ಹೊರಬಿದ್ದಿದೆ.
ಕೋವಿಡ್ ಕಾರಣದಿಂದ ಈ ಹಿಂದೆ ವಿದ್ಯಾರ್ಥಿಗಳ ಫಸ್ಟ್ ಪಿಯು ಫಲಿತಾಂಶದ ಆಧಾರದ ಮೇಲೆ ದ್ವಿತೀಯ ಪಿಯು ಪರೀಕ್ಷೆ ಪಲಿತಾಂಶ ನೀಡಲಾಗಿತ್ತು. ಈ ಫಲಿತಾಂಶವನ್ನು ತಿರಸ್ಕರಿಸಿ ಪರೀಕ್ಷೆ ಬರೆದಿದ್ದ 592 ವಿದ್ಯಾರ್ಥಿಗಳ ಫಲಿತಾಂಶ ಇಂದು ಪ್ರಕಟಗೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಪಿಯು ಇಲಾಖೆ, ಪರೀಕ್ಷೆ ಬರೆದಿದ್ದ 592 ವಿದ್ಯಾರ್ಥಿಗಳಲ್ಲಿ 556 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಉಳಿದ 36 ಮಂದಿ ಅನುತ್ತೀರ್ಣರಾಗಿದ್ದಾರೆ ಎಂದು ತಿಳಿಸಿದೆ.
351 ಪುನರಾವರ್ತಿತ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದು, ಅವರಲ್ಲಿ 183 ಮಂದಿ ಪಾಸ್ ಆಗಿದ್ದು, 168 ಮಂದಿ ವಿದ್ಯಾರ್ಥಿಗಳು ಫೇಲಾಗಿದ್ದಾರೆ.  ಇನ್ನು 17,470 ಖಾಸಗಿ ವಿದ್ಯಾರ್ಥಿಗಳ ಪೈಕಿ 4,768 ಪಾಸ್ 12,702 ವಿದ್ಯಾರ್ಥಿಗಳ ಫೇಲ್ ಆಗಿದ್ದಾರೆ.
ಒಟ್ಟು 18,413 ವಿದ್ಯಾರ್ಥಿಗಳಲ್ಲಿ 5,507 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 12,906 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಈ ಬಾರಿ ಶೇ.29.91 ಫಲಿತಾಂಶ ಬಂದಿದೆ.
ಸೈನ್ಸ್ ವಿಭಾಗದಲ್ಲಿ ಶೇ.70.83ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದರೆ, ಕಾಮರ್ಸ್ ನಲ್ಲಿ ಶೇ.29.98ರಷ್ಟು ವಿದ್ಯಾರ್ಥಿಗಳು ಹಾಗೂ ಆರ್ಟ್ಸ್ ವಿಭಾಗದಲ್ಲಿ ಶೇ.32.06ರಷ್ಟು ಫಲಿತಾಂಶ ಬಂದಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತೆ ಹಿಂದಿನ ಫಲಿತಾಂಶ ಪಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಅವರು ಮತ್ತೆ ಪೂರಕ ಪರೀಕ್ಷೆ ಬರೆದು ಉತ್ತೀರ್ಣರಾಗಬೇಕು ಎಂದು ಇಲಾಖೆ ತಿಳಿಸಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss