spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಎರಡನೇ ಕ್ವಾಲಿಫೈಯರ್​ ಪಂದ್ಯ: ಡೆಲ್ಲಿ ವಿರುದ್ಧ ಕೋಲ್ಕತ್ತಾ ಬೌಲಿಂಗ್ ಆಯ್ಕೆ

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಐಪಿಎಲ್ ​​ನ ಎರಡನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಕೋಲ್ಕತ್ತಾ ತಂಡ ಮುಖಾಮುಖಿಯಾಗಿವೆ. ಶಾರ್ಜಾ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದೆ. ಟಾಸ್​ ಗೆದ್ದಿರುವ ಮಾರ್ಗನ್​ ನೇತೃತ್ವದ ಕೋಲ್ಕತ್ತಾ ಪಡೆ ಬೌಲಿಂಗ್​ ಆಯ್ದುಕೊಂಡಿದೆ.
ಎಲಿಮಿನೇಟರ್​​ ಪಂದ್ಯದಲ್ಲಿ ಸುನಿಲ್​ ನರೈನ್​ ಅವರ ಆಲ್​ರೌಂಡರ್ ಆಟದಿಂದ ಆರ್​ಸಿಬಿ ವಿರುದ್ಧ ಗೆಲುವು ಸಾಧಿಸಿರುವ ಕೋಲ್ಕತ್ತಾ, ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿ 3ನೇ ಸಲ ಫೈನಲ್​ಗೆ ಲಗ್ಗೆ ಹಾಕುವ ಕನಸು ಕಾಣುತ್ತಿದೆ. ಆದರೆ, ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಸೋಲು ಕಂಡಿರುವ ಡೆಲ್ಲಿ ಇಂದಿನ ಪಂದ್ಯ ಗೆದ್ದು ಫೈನಲ್ ತಲುಪುವ ನಿರೀಕ್ಷೆಯಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್​​: ಪೃಥ್ವಿ ಶಾ, ಶಿಖರ್ ಧವನ್​, ಶ್ರೇಯಸ್ ಅಯ್ಯರ್​, ರಿಷಭ್ ಪಂತ್​(ಕ್ಯಾಪ್ಟನ್​, ವಿ.ಕೀ), ಸ್ಟೋನಿಸ್​, ಶಿಮ್ರಾನ್ ಹೆಟ್ಮಾಯರ್​​, ಅಕ್ಸರ್ ಪಟೇಲ್​, ಆರ್​​.ಅಶ್ವಿನ್​, ಕಾಗಿಸೊ ರಬಾಡಾ, ಆವೇಶ್ ಖಾನ್​​,ಅನ್ರಿಚ್ ನಾರ್ಟ್ಜೆ

ಕೋಲ್ಕತ್ತಾ ನೈಟ್​ ರೈಡರ್ಸ್​: ಶುಬ್ಮನ್​ ಗಿಲ್​, ವೆಂಕಟೇಶ್​ ಅಯ್ಯರ್​, ರಾಹುಲ್ ತ್ರಿಪಾಠಿ, ನಿತಿಶ್ ರಾಣಾ, ಇಯಾನ್ ಮಾರ್ಗನ್(ನಾಯಕ)​, ದಿನೇಶ್ ಕಾರ್ತಿಕ್​(ವಿ.ಕೀ), ಸುನಿಲ್ ನರೈನ್​​, ಶಕೀಬ್​ ಅಲ್​ ಹಸನ್​, ಫಾರ್ಗಿಸೋ, ಶಿವಂ ಮಾವಿ, ವರುಣ್​​ ಚಕ್ರವರ್ತಿ

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss