ಎರಡನೇ ಕ್ವಾಲಿಫೈಯರ್​ ಪಂದ್ಯ: ಟಾಸ್ ಗೆದ್ದು ಬೌಲಿಂಗ್​ ಆಯ್ದುಕೊಂಡ ರಾಜಸ್ಥಾನ ರಾಯಲ್ಸ್​​

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಎರಡನೇ ಕ್ವಾಲಿಫೈಯರ್​ ಪಂದ್ಯ ನಡೆಯುತ್ತಿದ್ದು, ರಾಜಸ್ಥಾನ ರಾಯಲ್ಸ್​ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ತಂಡ ಫೈನಲ್​ಗೆ ಪ್ರವೇಶ ಪಡೆದುಕೊಳ್ಳಲಿದ್ದು, ಗುಜರಾತ್​ ಟೈಟನ್ಸ್​ ವಿರುದ್ಧ ಸೆಣಸಾಟ ನಡೆಸಲಿದೆ.

ಟಾಸ್​ ಗೆದ್ದಿರುವ ರಾಜಸ್ಥಾನ ರಾಯಲ್ಸ್​​ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದ್ದು, ಆರ್​ಸಿಬಿ ಬ್ಯಾಟಿಂಗ್ ನಡೆಸಲಿದೆ. ಮಹತ್ವದ ಪಂದ್ಯಕ್ಕಾಗಿ ಉಭಯ ತಂಡದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಲಾಗಿಲ್ಲ.
ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ರಾಜಸ್ಥಾನ ಹಾಗೂ ಎಲಿಮಿನೇಟರ್​ ಪಂದ್ಯದಲ್ಲಿ ರೋಚಕ ಗೆಲುವು ದಾಖಲು ಮಾಡಿರುವ ಆರ್​ಸಿಬಿ ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗಿವೆ.

ರಾಯಲ್​ ಚಾಲೆಂಜರ್ಸ್ ಬೆಂಗಳೂರು: ವಿರಾಟ್​ ಕೊಹ್ಲಿ, ಡುಪ್ಲೆಸಿಸ್​(ಕ್ಯಾಪ್ಟನ್​), ರಜತ್​ ಪಾಟಿದಾರ್, ಗ್ಲೇನ್ ಮ್ಯಾಕ್ಸ್​ವೆಲ್, ಮಹಿಪಾಲ್​, ದಿನೇಶ್ ಕಾರ್ತಿಕ್​(ವಿ.ಕೀ), ಶಹಬಾಜ್​ ಅಹ್ಮದ್,ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್​ವುಡ್, ಮೊಹಮ್ಮದ್ ಸಿರಾಜ್

ರಾಜಸ್ಥಾನ ರಾಯಲ್ಸ್​​: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್​​(ವಿ.ಕೀ, ಕ್ಯಾಪ್ಟನ್), ದೇವದತ್ ಪಡಿಕ್ಕಲ್​, ಶಿಮ್ರಾನ್ ಹೆಟ್ಮಾಯರ್, ರಿಯಾಗ್ ಪರಾಗ್, ಆರ್​.ಅಶ್ವಿನ್, ಟ್ರೆಂಟ್ ಬೌಲ್ಟ್​, ಪ್ರಸಿದ್ಧ ಕೃಷ್ಣ, ಯಜುವೇಂದ್ರ ಚಹಲ್,ಮೆಕಾಯ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!