ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಆಂಗ್ಲರ ಪಡೆ 6 ವಿಕೆಟ್ ಕಳೆದುಕೊಂಡು164 ರನ್ ಗಳಿಗೆ , ಟೀಮ್ ಇಂಡಿಯಾದ ಗೆಲುವಿಗೆ 165 ರನ್ ಗಳ ಟಾರ್ಗೆಟ್ ನೀಡಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ತಂಡದ ಜೋಸ್ ಬಟ್ಲರ್ರನ್ನು ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಎಲ್ಬಿ ಬಲೆಗೆ ಬೀಳಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.
ಜೇಸನ್ ರಾಯ್ 46 ರನ್ ಸಿಡಿಸಿದರು. ಮಲನ್ 24 ರನ್ ಸಿಡಿಸಿ ಚಹಾಲ್ಗೆ ವಿಕೆಟ್ ಒಪ್ಪಿಸಿದರು. ಇವರ ಬೆನ್ನಲ್ಲೇ ರಾಯ್ ಕೂಡ ವಾಷಿಂಗ್ಟನ್ ಬೌಲಿಂಗ್ನಲ್ಲಿ ಭುವಿಗೆ ಕ್ಯಾಚ್ ನೀಡಿ ಔಟಾದರು.
ನಂತರ ಬಂದವರು ತಂಡದ ಮೊತ್ತವನ್ನು ಹೆಚ್ಚಿಸುವ ಆತುರದಲ್ಲಿ ವಿಕೆಟ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರು. ಜಾನಿ ಬೈರ್ಸ್ಟೋವ್ 20, ಮಾರ್ಗನ್ 28, ಬೆನ್ ಸ್ಟೋಕ್ಸ್ 24 ರನ್ಗಳಿಸಿದರು.
ಭಾರತದ ಪರ ಭುವನೇಶ್ವರ್ ಕುಮಾರ್ 28ಕ್ಕೆ 1, ಸುಂದರ್ 29ಕ್ಕೆ 2, ಶಾರ್ದುಲ್ ಠಾಕೂರ್ 29ಕ್ಕೆ 2, ಚಹಾಲ್ 34ಕ್ಕೆ 1 ವಿಕೆಟ್ ಪಡೆದರು.