ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ : India Playing XI ಆಯ್ಕೆ ಸರಿಯಾಗಿಲ್ಲ ಎಂದ ಸುನಿಲ್ ಗವಾಸ್ಕರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಯ್ಕೆ ಮಾಡಿಕೊಂಡಿರುವ ಪ್ಲೇಯಿಂಗ್ ಇಲೆವೆನ್‌ಗೆ ಕ್ರಿಕೆಟ್ ತಜ್ಞರಿಂದ ಭಾರೀ ಟೀಕೆಗಳು ವ್ಯಕ್ತವಾಗಿವೆ. ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿ, ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಸೇರಿಸಿಕೊಳ್ಳದಿರುವ ನಿರ್ಧಾರವನ್ನು ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತೆಂಡೂಲ್ಕರ್-ಆಂಡರ್ಸನ್ ಟ್ರೋಫಿಯ ಭಾಗವಾಗಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತಿದ್ದು ಗೊತ್ತೇ ಇದೆ. ಹಾಗಾಗಿ ಸರಣಿಯಲ್ಲಿ ಕಮ್​​ಬ್ಯಾಕ್ ಮಾಡಬೇಕಿರುವ ಪಂದ್ಯದಲ್ಲಿ ಮ್ಯಾಚ್​​ ವಿನ್ನರ್​ಗಳಿಗೆ ಅವಕಾಶ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಬುಮ್ರಾ, ಸಾಯಿ ಸುದರ್ಶನ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಕೈಬಿಟ್ಟು, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್ ಮತ್ತು ಆಕಾಶ್ ದೀಪ್‌ಗೆ ಅವಕಾಶ ನೀಡಲಾಗಿದೆ.

ಈ ಸಂದರ್ಭದಲ್ಲಿ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಪ್ರತಿಕ್ರಿಯಿಸಿ,, “ಇಬ್ಬರು ಉತ್ತಮ ಸ್ಪಿನ್ನರ್‌ಗಳೊಂದಿಗೆ ಟೀಮ್ ಇಂಡಿಯಾ ಈ ಪಂದ್ಯವನ್ನು ಆಡುತ್ತದೆ ಎಂಬ ನಿರೀಕ್ಷೆ ನನಗಿರಲಿಲ್ಲ. ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಭಾರತಕ್ಕೆ ಲಾಭದಾಯಕ. ಟೀಂ ಇಂಡಿಯಾ ಹೆಚ್ಚಿನ ರನ್ ಗಳಿಸಿದರೆ ಗೆಲುವಿನ ಸಾಧ್ಯತೆ ಇದೆ,” ಎಂದಿದ್ದಾರೆ.

ಆದರೆ ಭಾರತೀಯ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅವರು ಮ್ಯಾನೇಜ್​ಮೆಂಟ್ ವಿಧಾನವನ್ನು ಕಟುವಾಗಿ ಟೀಕಿಸಿದ್ದಾರೆ. ಕುಲದೀಪ್ ಯಾದವ್ ಅವರನ್ನು ಎಡ್ಜ್‌ಬಾಸ್ಟನ್ ನಂತಹ ಪಿಚ್‌ನಲ್ಲಿ ಚೆಂಡು ಸ್ವಲ್ಪ ತಿರುಗುತ್ತದೆ ಎಂದು ತಿಳಿದು ನೀವು ಅಂತಹ ನಿರ್ಧಾರ ತೆಗೆದುಕೊಳ್ಳುತ್ತೀರಾ? ಎಂದು ಅವರು ಪ್ರಶ್ನಿಸಿದ್ದಾರೆ.. ಇದು ಮ್ಯಾನೇಜ್‌ಮೆಂಟ್‌ನ ನಿರ್ಧಾರಗಳ ಮೇಲೆ ಪ್ರಶ್ನೆ ಎಬ್ಬಿಸುತ್ತದೆ. ಜೊತೆಗೆ, ಅಗ್ರ ಕ್ರಮಾಂಕದ ವಿಫಲತೆಯ ಕಾರಣವಿಲ್ಲದೆ ಆಲ್‌ರೌಂಡರ್‌ಗಳಿಗೆ ಅವಕಾಶ ನೀಡಿರುವ ನಾಯಕ ಶುಭ್ಮನ್ ಗಿಲ್ ಅವರ ಸಮರ್ಥನೆಯನ್ನು ಅವರು ತಿರಸ್ಕರಿಸಿದ್ದಾರೆ.

ಬ್ಯಾಟಿಂಗ್‌ನಲ್ಲಿ ಆಳಕ್ಕಾಗಿ ಆಲ್‌ರೌಂಡರ್‌ಗಳಾದ ನಿತೀಶ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಕರೆತರಲಾಗಿದೆ ಎಂಬ ನಾಯಕ ಶುಭ್​ಮನ್ ಗಿಲ್ ಅವರ ಸಮರ್ಥನೆಯನ್ನು ಗವಾಸ್ಕರ್ ಟೀಕಿಸಿದ್ದಾರೆ.

ಈ ಮಧ್ಯೆ, ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗಳಲ್ಲಿ ಹೆಚ್ಚು ಸಿಕ್ಸರ್ ಹೊಡೆದ ಬ್ಯಾಟ್ಸ್ಮನ್‌ಗಳ ಟಾಪ್-10 ಪಟ್ಟಿ ಕೂಡ ಚರ್ಚೆಗೆ ಗ್ರಾಸವಾಗಿದ್ದು, ತಂಡದ ಆಟಗಾರರಿಂದ ಹೆಚ್ಚು ನಿರೀಕ್ಷೆ ಇರಿಸಲಾಗುತ್ತಿದೆ. ಎರಡನೇ ಟೆಸ್ಟ್ ಟೀಮ್ ಇಂಡಿಯಾ ತನ್ನ ಪಡಿತ ಶಕ್ತಿ ಪ್ರದರ್ಶಿಸಿ ಸರಣಿಯಲ್ಲಿ ಕಮ್‌ಬ್ಯಾಕ್ ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!