ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ: ಶುಲ್ಕ ಪಾವತಿಸುವ ದಿನಾಂಕದಲ್ಲಿ ವಿಸ್ತರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಸಿದ್ಧತೆಗಳು ನಡೆಯುತ್ತಿವೆ. ಇದೀಗ ಪರೀಕ್ಷೆಗೆ ಶುಲ್ಕ ಪಾವತಿಸಲು ದಿನಾಂಕವನ್ನು ವಿಸ್ತರಣೆ ಮಾಡಿ ಪಿಯು ಬೋರ್ಡ್ ಆದೇಶಿಸಿದೆ‌.
ಈ ಹಿಂದೆ ಜನವರಿ 17ರವರೆಗೆ 700 ರೂಪಾಯಿ ದಂಡದೊಂದಿಗೆ ಶುಲ್ಕ ಕಟ್ಟಲು ಅವಕಾಶವಿತ್ತು. ಆದರೆ, ಪೋಷಕರು ಹಾಗೂ ವಿದ್ಯಾರ್ಥಿಗಳ ಮನವಿ ಮೇರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅನುತ್ತೀರ್ಣ ಹಾಗೂ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಕಟ್ಟಲು ಈ ತಿಂಗಳ ಅಂತ್ಯದವರೆಗೆ ಶುಲ್ಕ ಪಾವತಿಸಬಹುದಾಗಿದೆ.‌
ಜನವರಿ 21 ರಿಂದ 31ರವರೆಗೆ ಕಾಲೇಜಿಗೆ ಶುಲ್ಕ ಪಾವತಿಸಬಹುದು. ಕಾಲೇಜಿನವರು ಶುಲ್ಕವನ್ನು ಖಜಾನೆಗೆ ಸಂದಾಯ ಮಾಡಲು ಹಾಗೂ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಲು ಫೆಬ್ರವರಿ 2ರಂದು ಕಡೇ ದಿನವಾಗಿದೆ.
ಇನ್ನು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು ಕಚೇರಿಗೆ ಅರ್ಜಿಗಳನ್ನು ಫೆಬ್ರವರಿ 4ರಂದು ಸಲ್ಲಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!