Sunday, June 26, 2022

Latest Posts

ಭದ್ರತಾ ಪಡೆ- ಉಗ್ರರ ನಡುವೆ ಎನ್ ಕೌಂಟರ್: ಹತ ಉಗ್ರರ ಸಂಖ್ಯೆ 7ಕ್ಕೆ ಏರಿಕೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕಾಶ್ಮೀರದ ಶೋಪಿಯಾನ್ ಮತ್ತು  ತ್ರಾಲ್  ನಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಎರಡು ಪ್ರತ್ಯೇಕ ಎನ್ ಕೌಂಟರ್ ನಲ್ಲಿ, ಅಲ್ ಖೈದಾ ಉಗ್ರ ಸಂಘಟನೆಯ ಅಂಗಸಂಸ್ಥೆ ಅನ್ಸಾರ್ ಗಜ್ವತ್ ಉಲ್ ಹಿಂದ್ (ಎಜಿಹೆಚ್) ಮುಖ್ಯಸ್ಥ ಸೇರಿದಂತೆ ಏಳು ಉಗ್ರರನ್ನು ಹತ್ಯೆ ಮಾಡಲಾಗಿದೆ.

ಅವಂತಿಪೋರಾ ಜಿಲ್ಲೆಯ ತ್ರಾಲ್ ನಲ್ಲಿ ಉಗ್ರರು ಅಡಗಿಕುಳಿತಿರುವ ಮಾಹಿತಿ ತಿಳಿದುಬರುತ್ತಿದ್ದಂತೆಯೇ ಭಾರತೀಯ ಸೇನಾಪಡೆಗಳು ಕಾರ್ಯಾಚರಣೆಗಿಳಿದಿದ್ದವು. ಕಾರ್ಯಾಚರಣೆ ಆರಂಭಿಸುತ್ತಿದ್ದಂತೆಯೇ ಅಡಗಿಕುಳಿತಿದ್ದ ಉಗ್ರರು ಸೇನಾಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಕೂಡಲೇ, ಭಯೋತ್ಪಾದಕರನ್ನು ಸೇನೆ ಸುತ್ತುವರಿದಿದ್ದು ಎಜಿಹೆಚ್ ಮುಖ್ಯಸ್ಥ ಇಮ್ತಿಯಾಜ್ ಷಾ ಸೇರಿದಂತೆ ಏಳು ಉಗ್ರರನ್ನು ಶುಕ್ರವಾರ ಹತ್ಯೆ ಮಾಡಿದ್ದಾರೆ

ಕಾಶ್ಮೀರ ವಲಯದ ಐಜಿ ವಿಜಯ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ಶೋಪಿಯಾನ್‌ನಲ್ಲಿ ಹತ್ಯೆಯಾದ ಐದು ಉಗ್ರರಲ್ಲಿ ಇಬ್ಬರು ಹಿಜ್ಬುಲ್-ಉಲ್-ಮುಜಾಹಿದ್ದೀನ್‌ಗೆ ಸೇರಿದವರು. ಓರ್ವ ಲಷ್ಕರ್-ಎ-ತೋಯಿಬಾ ಮತ್ತು ಇನ್ನೆರಡು ಮಂದಿ ಎಜಿಎಚ್‌ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss