Wednesday, July 6, 2022

Latest Posts

ಮೂವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಭದ್ರತಾ ಪಡೆ: ಮುಂದುವರಿದ ಕಾರ್ಯಾಚರಣೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಎನ್ ಕೌಂಟರ್ ನಡೆದಿದ್ದು, ಮೂವರು ಅಪರಿಚಿತ ಉಗ್ರರನ್ನು ಹತ್ಯೆ ಮಾಡುವಲ್ಲಿ ಭಾರತೀಯ ಭದ್ರತಾ ಪಡೆ ಯಶಸ್ವಿಯಾಗಿದೆ.

ಭಯೋತ್ಪಾದಕರ ಸಂಘಟನೆಗೆ ಹೊಸದಾಗಿ ಸೇರಿದ ಯುವಕನೋರ್ವನನ್ನು  ಎನ್ ಕೌಂಟರ್ ಆರಂಭಕ್ಕೂ ಮುನ್ನವೇ ಪೊಲೀಸರು ಶರಣಾಗುವಂತೆ ಕೇಳಿದರು. ಆದರೆ ಬೇರೆ ಉಗ್ರರು ಶರಣಾಗಲು ಬಿಡಲಿಲ್ಲ. ಹೀಗಾಗಿ ಪೊಲೀಸರು ಎನ್ ಕೌಂಟರ್ ದಾಳಿ ನಡೆಸಿ ಆತನನ್ನು ಹತ್ಯೆ ಮಾಡಿದರು.

ಶೋಪಿಯಾನ್ ಜಿಲ್ಲೆಯ ಹಡಿಪೊರದಲ್ಲಿ ಎನ್ ಕೌಂಟರ್ ಇನ್ನೂ ಮುಂದುವರೆದಿದ್ದು, ಹೆಚ್ಚಿನ ವಿವರ ತಿಳಿದುಬಂದಿಲ್ಲ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss