ಕಾಶ್ಮೀರದಲ್ಲಿ ಎಲ್‌ಇಟಿ ಉಗ್ರನನ್ನು ವಶಕ್ಕೆ ಪಡೆದ ಭದ್ರತಾಪಡೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಸೋಪೋರ್‌ನಲ್ಲಿ ಹೈಬ್ರಿಡ್ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ಮತ್ತು ಓವರ್ ಗ್ರೌಂಡ್ ವರ್ಕರ್ (ಒಜಿಡಬ್ಲ್ಯು) ನನ್ನು ಕಾಶ್ಮೀರ ಭದ್ರತಾಪಡಗಳು ಬಂಧಿಸಿದ್ದಾರೆ ಮತ್ತು ಅವರ ವಶದಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಇಬ್ಬರು ಶಂಕಿತ ಭಯೋತ್ಪಾದಕರ ಚಲನವಲನದ ಬಗ್ಗೆಸುಳುವು ಪಡೆದ ನಂತರ ಪೊಲೀಸ್ ಕಾಂಪೊನೆಂಟ್ ರಫಿಯಾಬಾದ್, 22 ರಾಷ್ಟ್ರೀಯ ರೈಫಲ್ಸ್ ಮತ್ತು 92 ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಜಂಟಿ ಪಕ್ಷಗಳು ನೌಪೊರಾ ಸಿಕ್ಸ್ ವೇನಲ್ಲಿ ಏಕಕಾಲದಲ್ಲಿ ಅನೇಕ ಮೊಬೈಲ್ ವಾಹನ ಚೆಕ್ ಪೋಸ್ಟ್ (ಎಂವಿಸಿಪಿ) ಗ್ರಿಡ್‌ಗಳಲ್ಲಿ ತಪಾಸಣೆ ನಡೆಸಲು ಪ್ರಾರಂಭಿಸಿದವು. ಜಂಕ್ಷನ್, MRF ಚೌಕ್, ಬಹ್ರಂಪೋರಾ ಸೇತುವೆ, ಸೋನವಾನಿ ಸೇತುವೆ, ಮತ್ತು ಬೆಹ್ರಂಪೋರಾ ಸೀಲೂ ಸೇತುವೆ ಗಳಲ್ಲಿ ಚುರುಕಿನ ತಪಸಣೆ ನಡೆಯಿತು.

ರಾತ್ರಿ 7.30 ರ ಸುಮಾರಿಗೆ ವಾಹನಗಳನ್ನು ತಪಾಸಣೆ ಮಾಡುವಾಗ, ಬೆಹ್ರಾಂಪೊರಾ ಸೀಲೂ ಸೇತುವೆಯಲ್ಲಿ ಸೀಲೋ ಕಡೆಗೆ ಇಬ್ಬರು ವ್ಯಕ್ತಿಗಳೊಂದಿಗೆ ವಾಹನದ ಅನುಮಾನಾಸ್ಪದ ಚಲನೆಯನ್ನು ಗಮನಿಸಿದರು. ವಾಹನ ನಿಲ್ಲಿಸಲು ಹೇಳಿದಾಗ ಪ್ರಯಾಣಿಕರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದರು. ಅವರನ್ನು ಬೆನ್ನಟ್ಟಿದ ನಂತರ ಭದ್ರತಾ ಪಡೆಗಳು ಭಯೋತ್ಪಾದಕನನ್ನು ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಬಂಧಿತ ವ್ಯಕ್ತಿಗಳು ಸೀಲೋಗೆ ಆಯುಧ ಮತ್ತು ಹ್ಯಾಂಡ್ ಗ್ರೆನೇಡ್ ಅನ್ನು ತಲುಪಿಸುವ ಕೆಲಸ ಮಾಡುತ್ತಿದ್ದರು ಎಂಬುದು ಪತ್ತೆಯಾಗಿದೆ. ಇದನ್ನು ಉದ್ದೇಶಿತ ಹತ್ಯೆಗೆ ಬಳಸಲು ಯೋಜಿಸಲಾಗಿತ್ತು.

ಆರೋಪಿಗಳನ್ನು ಸೋಪೋರ್‌ನ ಡಾಂಗಿವಾಚಾದ ಪಜಲ್‌ಪುರದ ಮುಜಾಫರ್ ಅಹ್ ದಾರ್ ಮತ್ತು ಸೋಪೋರ್‌ನ ತಾರ್ಜೂ ಅಂಬರ್‌ಪೋರಾದ ಸೋಫಿ ಇಶಾಕ್ ಅಹ್ಮದ್ ಎಂದು ಗುರುತಿಸಲಾಗಿದೆ.

ಪೊಲೀಸರು ಮುಜಾಫರ್ ಅಹ್ಮದ್ ದಾರ್ ವಶದಿಂದ ಪಿಸ್ತೂಲ್, ಎಂಟು ಸುತ್ತುಗಳ ಪಿಸ್ತೂಲ್ ಮ್ಯಾಗಜೀನ್ ಮತ್ತು ಒಂದು ಹ್ಯಾಂಡ್ ಗ್ರೆನೇಡ್ ಮತ್ತು ಸೋಫಿ ಇಶಾಕ್ ಅಹ್ಮದ್ ಅವರಿಂದ ಒಂದು ಚೈನೀಸ್ ಹ್ಯಾಂಡ್ ಗ್ರೆನೇಡ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!