ಜಮ್ಮುವಿನಲ್ಲಿ ಲಷ್ಕರ್-ಎ-ತೊಯ್ಬಾಗೆ ಸೇರಿದ್ದ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಶುಕ್ರವಾರ ಹೊಡೆದುರುಳಿಸಿವೆ.
ಉಗ್ರರು ಇರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು ಅರಗಮ್ ಪ್ರದೇಶದ ಬ್ರಾರ್‌ ನಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಬಳಿಕ ಗುಂಡಿನ ಚಕಮಕಿ ಪ್ರಾರಂಭವಾಗಿದೆ.ಕಾರ್ಯಾಚರಣೆ ತೀವ್ರಗೊಳಿಸಿದ ಭದ್ರತಾ ಪಡೆಗಳು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಹತ್ಯೆಗೀಡಾದ ಇಬ್ಬರು ಉಗ್ರರನ್ನು ಫೈಸಲ್ ಅಲಿಯಾಸ್ ಸಿಕಂದರ್ ಮತ್ತು ಅಬು ಉಕಾಸಾ ಎಂದು ಗುರುತಿಸಲಾಗಿದೆ. ಕಳೆದ ವರ್ಷ ಡಿಸೆಂಬರ್ 10 ರಂದು ಮತ್ತು ಫೆಬ್ರವರಿ 11 ರಂದು ಪಟ್ಟಣದ ಗುಲ್ಶನ್ ಚೌಕ್ ಮತ್ತು ನಿಶಾತ್ ಪಾರ್ಕ್‌ ನಲ್ಲಿ ಭಯೋತ್ಪಾದಕ ಹೈದರ್ ಜೊತೆಗೆ ಮೂವರು ಪೊಲೀಸರ ಹತ್ಯೆಯಲ್ಲಿ ಫೈಸಲ್ ಭಾಗಿಯಾಗಿದ್ದನು .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!