Wednesday, July 6, 2022

Latest Posts

ಮಾವಿನಕಾಯಿಗೆ ಉಪ್ಪು, ಖಾರ ಹಚ್ಕೊಂಡು ತಿಂತೀರಾ? ಇನ್ಮುಂದೆ ಈಸಿ ಮಾವಿನಕಾಯಿ ಮಾಮಾ ಮಾಡ್ಕೊಂಡು ತಿನ್ನಿ.. ಹೇಗೆ ನೋಡಿ

ಈಗ ಮಾವಿನಕಾಯಿ ಸೀಸನ್. ಮಾರ್ಕೆಟ್ ನಲ್ಲಿ ಎಲ್ಲಿಯೇ ನೋಡಿದರೂ ನಾನಾ ರೀತಿಯ ಮಾವಿನ ಕಾಯಿ, ಮಾವಿನ ಹಣ್ಣು. ಮಾವಿನಕಾಯಿಗೆ ಉಪ್ಪು, ಖಾರ ಹಚ್ಕೊಂಡು ತಿನ್ನುವ ಬದಲು ಮಾಮಾ ಮಾಡಿಕೊಂಡು ತಿನ್ನಿರಿ. ತಿನ್ನುವುದಕ್ಕೂ ರುಚಿ, ಮಾಡುವುದಕ್ಕೂ ಈಸಿ.. ಇಲ್ಲಿದೆ ರೆಸಿಪಿ…

ಬೇಕಾಗುವ ಸಾಮಗ್ರಿ:

ಮಾವಿನಕಾಯಿ
ಸೂಜು ಮೆಣಸು/ಹಸಿಮೆಣಸು
ಉಪ್ಪು

ಮಾಡುವ ವಿಧಾನ:

ಮೊದಲಿಗೆ ಮಾವಿನ ಕಾಯಿಯನ್ನು ಚಿಕ್ಕ ಚಿಕ್ಕ ಹೋಳು ಮಾಡಿಕೊಳ್ಳಿ.
ನಂತರ ಒಂದು ಪ್ಲಾಸ್ಟಿಕ್ ಕವರ್ ತೆಗೆದುಕೊಳ್ಳಿ. ಅದಕ್ಕೆ ಉಪ್ಪು, ಸೂಜುಮೆಣಸು ಮತ್ತು ಹೆಚ್ಚಿಕೊಂಡಿರುವ ಮಾವಿನಕಾಯಿ ಹಾಕಿ ಚೆನ್ನಾಗಿ ಗಸ-ಗಸ ತಿಕ್ಕಿ. 10 ನಿಮಿಷ ತಿಕ್ಕಿ. ಉಪ್ಪು, ಮೆಣಸು ನೀರಾಗುವವರೆಗೂ ಹಾಗೆ ಮಾಡಿ. ಉಪ್ಪು ನೀರಾಗಿ ಮಾವಿನಕಾಯಿ ಚೆನ್ನಾಗಿ ಉಪ್ಪು, ಖಾರ ಕುಡಿದಿರುತ್ತದೆ. ಹೀಗೆ ಮಾಡಿದರೆ ಮಾವಿನ ಕಾಯಿ ಮಾಮಾ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss