ಸಾಮಾಗ್ರಿಗಳು
ಪುದೀನಾ ಎಲೆಗಳು – ಒಂದೂವರೆ ಕಪ್
ಕೊತ್ತಂಬರಿ ಎಲೆಗಳು – ಸ್ವಲ್ಪ
ನಿಂಬೆ ರಸ – 2 ಟೀಸ್ಪೂನ್
ಹಸಿಮೆಣಸಿನಕಾಯಿ- 4
ಜೀರಿಗೆ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ – ಅರ್ಧ ಟೀಸ್ಪೂನ್
ಮಾಡುವ ವಿಧಾನ
ಮೊದಲು ಪುದೀನಾ ಎಲೆಗಳು, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕಾಗುತ್ತದೆ. ನಂತಹ ಮಿಕ್ಸರ್ ಜಾರ್ ತೆಗೆದುಕೊಂಡು ಪುದೀನಾ ಎಲೆಗಳು, ಕೊತ್ತಂಬರಿ ಸೊಪ್ಪು, ನಿಂಬೆ ರಸ ಹಾಗೂ ಹಸಿ ಮೆಣಸಿನಕಾಯಿಗಳನ್ನು ಸೇರಿಸಿ ಸಣ್ಣಗೆ ರುಬ್ಬಿಕೊಳ್ಳಬೇಕಾಗುತ್ತದೆ. ನಯವಾದ ಪೇಸ್ಟ್ ರೀತಿ ರೆಡಿ ಮಾಡಬೇಕಾಗುತ್ತದೆ. ಈ ಮಿಶ್ರಣಕ್ಕೆ ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಬೇಕು.
ಒಂದು ಮಿಕ್ಸಿಂಗ್ ಬೌಲ್‌ನಲ್ಲಿ ಎರಡು ಕಪ್ ಗೋಧಿ ಹಿಟ್ಟು, ಅರ್ಧ ಕಪ್ ರವೆ, ಉಪ್ಪು, ಜೀರಿಗೆ, ಸಕ್ಕರೆ ಸೇರಿಸಬೇಕು. ಪೂರಿಗಾಗಿ ಎಲ್ಲಾ ಹಿಟ್ಟಿನ ಮಿಶ್ರಣ ಚೆನ್ನಾಗಿ ಕಲಸಿಕೊಳ್ಳಬೇಕಾಗುತ್ತದೆ. ಕಲಸಿಕೊಂಡ ಹಿಟ್ಟನ್ನು ಒಂದು ಗಂಟೆ ಮುಚ್ಚಿ ಪಕ್ಕಕ್ಕೆ ಇರಿಸಿ.
ಒಂದು ಗಂಟೆಯ ನಂತರ ಹಿಟ್ಟು ಚೆನ್ನಾಗಿ ನೆನೆಯುತ್ತದೆ. ಈ ಹಿಟ್ಟನ್ನು ಮತ್ತೊಮ್ಮೆ ಐದು ನಿಮಿಷಗಳವರೆಗೆ ಕಲಸಿಕೊಳ್ಳಬೇಕಾಗುತ್ತದೆ. ಸಿದ್ಧವಾದ ಹಿಟ್ಟಿನಿಂದ ಚಿಕ್ಕ ಚಿಕ್ಕದಾದ ದುಂಡಗಿನ ಆಕಾರದಲ್ಲಿ ಉಂಡೆಗಳನ್ನು ಮಾಡಿಕೊಳ್ಳಿ.
ಇದೀಗ ಒಲೆಯನ್ನು ಆನ್ ಮಾಡಿ, ಬಾಣಲೆಯನ್ನು ಇಡಬೇಕು, ಅದರೊಳಗೆ ಡೀಪ್ ಫ್ರೈ ಮಾಡಲು ಬೇಕಾದ ಎಣ್ಣೆಯನ್ನು ಅದರೊಳಗೆ ಹಾಕಬೇಕು. ಎಣ್ಣೆ ಬಿಸಿಯಾದ ನಂತರ ಒಂದೊಂದಾಗಿ ಪೂರಿಯನ್ನು ಎರಡೂ ಬದಿಗಳಲ್ಲಿ ಮಧ್ಯಮ ಉರಿಯಲ್ಲಿ ಇರಿಸಿ ಹೊಂಬಣ್ಣ ಬರುವವರೆ ಫ್ರೈ ಮಾಡಬೇಕಾಗುತ್ತದೆ. ಎಲ್ಲಾ ಪೂರಿಗಳಿ ಇದೇ ರೀತಿ ಫ್ರೈ ಮಾಡಬೇಕಾಗುತ್ತದೆ.
ಈಗ ಸೂಪರ್ ಸಾಫ್ಟ್ ಆದ ಮತ್ತು ಗರಿಗರಿಯಾದ ಪುದೀನಾ ಪೂರಿ ಸವಿಯಲು ಸಿದ್ಧವಾಗಿದೆ.
ಆಲೂ ಕರಿ, ಚೋಲೆ, ಕೊಬ್ಬರಿ ಚಟ್ನಿ, ಬಾಂಬೆ ಚಟ್ನಿ, ಶೇಂಗಾ ಚಟ್ನಿ ಸೇರಿದಂತೆ ವಿವಿಧ ಚಟ್ನಿಗಳ ಜೊತೆಗೆ ರಚಿಕರವಾಗಿರುತ್ತದೆ.
ನೀವು ಒಂದು ದಿನದ ವಿಶೇಷವಾದ ಉಪಹಾರಕ್ಕಾಗಿ ಏನಾದರು ಸಿದ್ಧಪಡಿಸಬೇಕು ಎಂದು ಅನಿಸಿದಾಗ ಈ ಪುದೀನಾ ಪೂರಿ ಸಿದ್ಧಪಡಿಸೋದು ಬೆಸ್ಟ್.