Wednesday, August 17, 2022

Latest Posts

ನಿಮ್ಮಲ್ಲಿ ಹೊಂದಾಣಿ ಮಾಡಿಕೊಳ್ಳಲು ಸಾಧ್ಯವೇ ನೋಡಿ: ಗಾಯಕ ಹನಿ ಸಿಂಗ್​ ದಂಪತಿಗೆ ಕೋರ್ಟ್ ಸೂಚನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಗಾಯಕ ಹನಿ ಸಿಂಗ್​ ವಿರುದ್ಧ ಪತ್ನಿ ಶಾಲಿನಿ ತಲ್ವಾರ್ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ದಾಖಲು ಮಾಡಿಸ್ಸು, ಸದ್ಯ, ಇದರ ವಿಚಾರಣೆ ಕೋರ್ಟ್​ನಲ್ಲಿ ನಡೆಯುತ್ತಿದೆ. ಇದೀಗ ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್​, ‘ಹೊಂದಾಣಿ ಮಾಡಿಕೊಳ್ಳಲು ಸಾಧ್ಯವೇ ಎಂಬುದನ್ನು ನೋಡಿ’ ಎಂದು ದಂಪತಿಗೆ ಸೂಚಿಸಿದೆ.
ಹನಿ ಸಿಂಗ್​ ಮತ್ತು ಶಾಲಿನಿ ಸೆಪ್ಟೆಂಬರ್​ 3ರಂದು ಕೋರ್ಟ್​ಗೆ ತೆರಳಿದ್ದರು. ಈ ವೇಳೆ ಶಾಲಿನಿಗೆ ಕೋರ್ಟ್​ ಕಡೆಯಿಂದ ಒಂದು ರಿಲೀಫ್​ ಸಿಕ್ಕಿದೆ. ಗಂಡನ ಮನೆಗೆ ತೆರಳಿ ತಮಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಬರಬಹುದು ಎಂದು ಕೋರ್ಟ್​ ಹೇಳಿದೆ. ಮುಂದಿನ ವಿಚಾರಣೆ ವೇಳೆ ಮನೆ ಮತ್ತು ಪರಿಹಾರದ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದೆ.
ಹನಿ ಸಿಂಗ್​ ಹಾಗೂ ಶಾಲಿನಿ ಅವರನ್ನು ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟ್​ ಚೇಂಬರ್​ಗೆ ಕರೆಸಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮತ್ತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಆಲೋಚಿಸಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಮುಂದಿನ ವಿಚಾರ ಸೆಪ್ಟೆಂಬರ್ 28ರಂದು ನಡೆಯಲಿದೆ.
ಅನಾರೋಗ್ಯದ ಕಾರಣ ನೀಡಿ ಹನಿ ಸಿಂಗ್​ ಕೋರ್ಟ್​ಗೆ ಹಾಜರಾಗಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಧೀಶೆ ತನಿಯಾ ಸಿಂಗ್​ ಅಸಮಾಧಾನ ಹೊರ ಹಾಕಿದ್ದರು. ‘ಯಾರೊಬ್ಬರೂ ಕಾನೂನಿಗಿಂತ ದೊಡ್ಡವರಲ್ಲ. ಈ ಪ್ರಕರಣವನ್ನು ಅವರು ಹಗುರವಾಗಿ ತೆಗೆದುಕೊಂಡಿದ್ದು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ’ ಎಂದಿದ್ದರು. ಈಗ ಅವರು ವಿಚಾರಣೆಗೆ ಹಾಜರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!