ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ಬಾಸ್ ಕನ್ನಡ ಸೀಸನ್ 11 ನಾಳೆ (ಸೆಪ್ಟೆಂಬರ್ 29) ಪ್ರಾರಂಭವಾಗಲಿದೆ. ಸಂಜೆ ಆರು ಗಂಟೆ ಶೋ ಪ್ರಾರಂಭ ಆಗಲಿದೆ.
ಇಷ್ಟು ವರ್ಷ ಶೋ ಇನ್ಯಾಗುರೇಷನ್ ದಿನವೇ ಬಿಗ್ಬಾಸ್ ಸ್ಪರ್ಧಿಗಳನ್ನು ಘೋಷಿಸುವುದು ಬಂದಿರುವ ವಾಡಿಕೆ. ಆದರೆ ಇದೇ ಮೊದಲ ಬಾರಿಗೆ ಒಂದು ದಿನ ಮುಂಚಿತವಾಗಿಯೇ ಬಿಗ್ಬಾಸ್ ಮನೆಗೆ ಹೋಗಲಿರುವ ಕೆಲವು ಸ್ಪರ್ಧಿಗಳ ಹೆಸರು ಘೋಷಣೆ ಮಾಡಲಾಗಿದೆ. ಕಲರ್ಸ್ ವಾಹಿನಿಯ ಮತ್ತೊಂದು ರಿಯಾಲಿಟಿ ಶೋ ‘ರಾಜಾ ರಾಣಿ’ಯ ಫಿನಾಲೆ ನಡೆಯುತ್ತಿದ್ದು, ಆ ಶೋನ ಫಿನಾಲೆ ವೇದಿಕೆಯಲ್ಲಿ ಕೆಲವು ಬಿಗ್ಬಾಸ್ ಸ್ಪರ್ಧಿಗಳ ಹೆಸರು ಘೋಷಿಸಲಾಗಿದೆ.
ಇದೀಗ ಕಿರುತೆರೆ ಫೇಮಸ್ ನಟಿ ಗೌತಮಿ ಜಾದವ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ.
ಇದು ‘ರಾಜ ರಾಣಿ’ ಗ್ರ್ಯಾಂಡ್ ಫಿನಾಲೆಯಲ್ಲಿ ಗೌತಮಿ ಹೆಸರು ರಿವೀಲ್ ಆಗಿದೆ. ಸತ್ಯ ಸೀರಿಯಲ್ ಖ್ಯಾತಿಯ ಗೌತಮಿ ಇನ್ಮುಂದೆ ಬಿಗ್ ಬಾಸ್ ಮನೆಯಲ್ಲಿ ನೋಡಬಹುದುದಾಗಿದೆ, ಹಾಗಾದ್ರೆ ಅವರು ಸ್ಪರ್ಗಕ್ಕೆ ಹೋಗ್ತಾರಾ? ಅಥವಾ ನರಕಕ್ಕೆ ಹೋಗ್ತಾರಾ? ಅದು ಪ್ರೇಕ್ಷಕರಿಗೆ ನಿರ್ಧರಿಸುವ ಅವಕಾಶವಿದೆ.
ಮನೆಗೆ ಅಚ್ಚರಿ ರೀತಿಯಲ್ಲಿ ವಕೀಲ ಜಗದೀಶ್ ಎಂಟ್ರಿ
ನಟಿ ಗೌತಮಿ ಜಾಧವ್ ಬಳಿಕ ಬಿಗ್ಬಾಸ್ ಮನೆಗೆ ಅಚ್ಚರಿ ರೀತಿಯಲ್ಲಿ ವಕೀಲ ಜಗದೀಶ್ ಅವರು ಎಂಟ್ರಿ ನೀಡಿದ್ದಾರೆ. ಕಳೆದ ಐದಾರು ವರ್ಷಗಳಿಂದಲೂ ಲಾಯರ್ ಜಗದೀಶ್ ಅವರು ಸುದ್ದಿಯಲ್ಲೇ ಇದ್ದಾರೆ. ಇತ್ತೀಚೆಗೆ ನಟ ದರ್ಶನ್ ವಿಚಾರವಾಗಿಯೂ ಸುದ್ದಿ ಮಾಡಿದ್ದರು.