Sunday, April 18, 2021

Latest Posts

ಫೇಸ್ ಬುಕ್ ನಲ್ಲಿ ಫೋಟೋ ಪೋಸ್ಟ್ ಮಾಡುತ್ತೀರಾ? ಅದಕ್ಕೂ ಮುನ್ನ ಈ ವಿಚಾರ ತಪ್ಪದೇ ತಿಳಿಯಿರಿ

ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಫೇಸ್ ಬುಕ್ ನಲ್ಲಿ ಫೋಟೋ ಹಾಕುವುದು ಒಂದು ಟ್ರೆಂಡ್ ಆಗಿಬಿಟ್ಟಿದೆ. ಅಷ್ಟೇ ಅಲ್ಲದ ತಮ್ಮ ವೈಯಕ್ತಿಕ ಜೀವನದ ಪ್ರತಿ ಕ್ಷಣದ ವಿವರವನ್ನೂ ಹಾಕುತ್ತಾರೆ. ಆದರೆ ಇದೇ ವಿಚಾರಗಳನ್ನು ಕೆಲವರು ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ನೀವು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕುವ ಮುನ್ನ ಏನು ಮಾಡಬೇಕು ನೋಡಿ…

ಅನ್ ಫ್ರೆಂಡ್:
ನಿಮಗೆ ಪರಿಚಯ ಇಲ್ಲದ ಜನರನ್ನು ನಿಮ್ಮ ಫ್ರೆಂಡ್ಸ್ ಲಿಸ್ಟ್ ನಿಂದ ಮೊದಲು ತೆಗೆದು ಹಾಕಿ. ಕೆಲವರು ನಿಮ್ಮ ಫೋಟೋಗಳನ್ನು ಕದಿವುದು ಮಾತ್ರವಲ್ಲದೆ. ಇದನ್ನು ಬಳಸಿಕೊಂಡು ನಿಮ್ಮನ್ನು ಬ್ಲಾಕ್ ಮೇಲ್ ಮಾಡುವ ಸಾಧ್ಯತೆ ಇದೆ.

ಲಾಕ್ ಮಾಡಿ:
ನಿಮ್ಮ ಪ್ರೊಫೈಲ್ ನನ್ನು ಲಾಕ್ ಮಾಡುವ ಹೊಸ ಫೀಚರ್ ಈಗ ಲಭ್ಯವಿದ್ದು, ನಿಮ್ಮ ಸ್ನೇಹಿತರನ್ನು ಬಿಟ್ಟು ಬೇರೆ ಯಾರು ನಿಮ್ಮ ಅಕೌಂಟ್ ಪ್ರವೇಶಿಸಲು ಸಾಧ್ಯವಿರುವುದಿಲ್ಲ.

ಪ್ರೈವಸಿ ಕೊಡಿ:
ನಿಮಗೆ ಅಕೌಂಟ್ ಲಾಕ್ ಮಾಡೋಕೆ ಇಷ್ಟ ಇಲ್ಲ ಎಂದರೆ ಫೇಸ್ ಬುಕ್ ಸೆಟ್ಟಿಂಗ್ಸ್ ನಲ್ಲಿನ ಪ್ರೈವಸಿ ಕೊಡಿ. ಇಲ್ಲಿ ನೀವು ನಿಮ್ಮ ಪೋಸ್ಟ್ ಗಳನ್ನು ಯಾರು ವೀಕ್ಷಿಸಬಹುದು ಎಂಬ ಆಯ್ಕೆ ನಿಮ್ಮದಾಗಿರುತ್ತದೆ.

ಲೈವ್ ಡೀಟೇಲ್ಸ್ ಬೇಡ:
ನೀವು ನಿಮ್ಮ ಸಂಗಾತಿಯೊಂದಿಗೆ, ಕುಟುಂಬದೊಂದಿಗೆ ಹೊರ ಹೋಗುವ ವಿಚಾರವನ್ನು ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲತಾಣದಲ್ಲಿ ಹಾಕಬೇಡಿ. ಇದನ್ನು ಬಳಸಿಕೊಂಡು ನಿಮ್ಮನ್ನು ಟ್ರಾಪ್ ಮಾಡುವ ಸಾಧ್ಯತೆ ಇದೆ.

ರಿಪೋರ್ಟ್:
ನಿಮಗೆ ಫೇಸ್ ಬುಕ್ ನಲ್ಲಿ ಯಾರಾದರೂ ಅನಗತ್ಯ ಮೆಸೇಜ್, ಕಾಲ್ಸ್ ಮಾಡಿದರೆ ಮುಲಾಜಿಲ್ಲದೆ ಅವರ ಖಾತೆಯನ್ನು ರಿಪೋರ್ಟ್ ಮಾಡಿ. ಇಂತವರನ್ನು ಫೇಸ್ ಬುಕ್ ಸಂಸ್ಥೆ ನಿಗಾವಹಿಸುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss