Saturday, August 13, 2022

Latest Posts

ಅಮ್ಮಕೊಟ್ಟ ಉಡುಗೊರೆ ನೋಡಿ ಕಣ್ಣೀರಿಟ್ಟ ಪುಟಾಣಿ: ಗಿಫ್ಟ್‌ ಬಾಕ್ಸ್‌ನಲ್ಲಿ ಏನಿತ್ತು?

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:‌

ಸರ್ಪ್ರೈಸ್ ಆಗಿ  ಯಾರಾದರೂ ಗಿಫ್ಟ್‌ ಕೊಟ್ಟಾಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ಕೆಲವೊಮ್ಮೆಯಂತೂ ಖುಷಿಗೆ ಕಣ್ಣೀರೆ ಬಂದುಬಿಡಬಹುದು ಅಲ್ವಾ? ಇಲ್ಲು ಕೂಡ ಇಂತಹದೇ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಅಮ್ಮ ತನ್ನ ಮಗನಿಗೆ ಸರ್ಪ್ರೈಸ್ ಆಗಿ ನಾಯಿಮರಿ ಗಿಫ್ಟ್‌ ಕೊಡುತ್ತಾಳೆ. ತನ್ನ ನೆಚ್ಚಿನ ಗೆಳಯನ್ನು ಕೈಯಲ್ಲಿ ಹಿಡಿದು ಆ ಬಾಲಕ ಆನಂದಬಾಷ್ಪ ಸುರಿಸುತ್ತಿರುವ ದೃಶ್ಯ ಇದಾಗಿದೆ.

ವಿಡಿಯೋದಲ್ಲಿ ಏನಿದೆ?

ಮಾಸ್ಕ್‌ ಧರಿಸಿ ಬಾಲಕನೊಬ್ಬ ನಿಂತಿರುವ ದೃಶ್ಯದಿಂದ 40 ಸೆಕೆಂಡಿನ ಈ ವಿಡಿಯೋ ಆರಂಭವಾಗುತ್ತದೆ. ಅಲ್ಲಿಗೆ ಬರುವ ಆತನ ತಾಯಿ ಅವನಿಗೊಂದು ಕಪ್ಪು-ಬಿಳಿ ಬಣ್ಣದ ನಾಯಿ ಮರಿಯನ್ನು ಗಿಫ್ಟ್‌ ಮಾಡುತ್ತಾಳೆ. ತನ್ನ ನೆಚ್ಚಿನ ಪುಟಾಣಿ ನಾಯಿಮರಿ ಸಿಕ್ಕ ಕೂಡಲೇ ಆತನ ಖುಷಿಗೆ ಪಾರವೇ ಇರುವುದಿಲ್ಲ. ಆ ನಾಯಿಮರಿಯನ್ನು ಕೈಯಲ್ಲಿ ಹಿಡಿದು ಆತ ಕಣ್ಣೀರನ್ನೇ ಸುರಿಸುತ್ತಾನೆ. ಈ ದೃಶ್ಯ ಈ ನೆಟ್ಟಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss