ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸತ್ತಿಲ್ಲ, ಕೈಲಾಸದಿಂದ ಬಂತು ಅಪ್ಡೇಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸ್ವಂಯಘೋಷಿತ ದೇವಮಾನವ ನಿತ್ಯಾನಂತ ಮೃತಪಟ್ಟಿದ್ದಾರೆಂಬ ಸುದ್ದಿ ಹರಿದಾಡಿತ್ತು. ಆದರೆ ಅವರು ಸತ್ತಿಲ್ಲ, ಆರೋಗ್ಯವಾಗಿಯೇ ಇದ್ದಾರೆ ಎನ್ನುವ ಅಪ್ಡೇಟ್‌ ಕೈಲಾಸದಿಂದ ಬಂದಿದೆ.

ಏಪ್ರಿಲ್​ 1 ರಂದು ನಿತ್ಯಾನಂದನ ಸಾವಿನ ಸುದ್ದಿ ಹೊರಬಿದ್ದಿದ್ದರಿಂದ ಏಪ್ರಿಲ್ ಫೂಲ್ ಮಾಡಿರಬಹುದು ಎನ್ನಲಾಗುತ್ತಿದೆ. ಶಿವರಾತ್ರಿ ಸತ್ಸಂಗದ ಸಂದರ್ಭದಲ್ಲಿ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ವಿಡಿಯೋ ವೈರಲ್ ಆಗಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ಭಾಷಣವನ್ನು ಹಠಾತ್ತನೆ ಸ್ಥಗಿತಗೊಳಿಸಲಾಯಿತು. ಅಂದಿನಿಂದ, ಯಾವುದೇ ಸತ್ಸಂಗಗಳು ನಡೆದಿಲ್ಲ, ಆತ ಎಲ್ಲಿದ್ದಾನೆ ಎನ್ನುವುದು ಯಾರಿಗೂ ತಿಳಿದಿರಲಿಲ್ಲ.

ಈ ಬೆಳವಣಿಗೆ ನಡುವೆ ನಿತ್ಯಾನಂದ ಎರಡು ದಿನಗಳ ಹಿಂದೆ ನಿಧನರಾದರು ಎಂಬ ವರದಿಗಳು ಹೊರಬಿದ್ದವು. ಕಳೆದ ಭಾನುವಾರ, ಅವರ ಸೋದರಳಿಯ ಸುಂದರೇಶ್ವರನ್ ಒಂದು ವೀಡಿಯೊವನ್ನು ಬಿಡುಗಡೆ ಮಾಡಿದರು, ಅದರಲ್ಲಿ ಸ್ವಾಮಿ ನಿತ್ಯಾನಂದ ಹಿಂದೂ ಧರ್ಮವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದ್ದರು.

ನಿತ್ಯಾನಂದನ ವಿರುದ್ಧ ಅತ್ಯಾಚಾರ, ಅಪಹರಣ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳಿವೆ. 2019ರಲ್ಲಿ ಭಾರತದಿಂದ ಪಲಾಯನ ಮಾಡಿದ್ದ. ಆತನ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಲ್ಲಿದೆ. ವಂಚನೆಗೆ ಸಂಬಂಧಿಸಿದ ಆರೋಪಗಳ ಮೇಲೆ ಫ್ರಾನ್ಸ್‌ನಲ್ಲಿಯೂ ಸಹ ಆತನಿಗಾಗಿ ಬೇಕಾಗಿದ್ದಾನೆ. 2020 ರಲ್ಲಿ ಹಿಂದೂ ಸಾರ್ವಭೌಮ ರಾಷ್ಟ್ರ ‘ಕೈಲಾಸ’ ಸ್ಥಾಪನೆ ಮಾಡಿರುವುದಾಗಿ ಘೋಷಿಸಿದ್ದ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!