ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, June 21, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೆತ್ತ ಮಗುವನ್ನೇ ಮಾರಾಟ ಮಾಡಿ, 7ತಿಂಗಳ ಬಳಿಕ ವಾಪಾಸ್ ಕೊಡಿ ಎಂದು ತಾಯಿ ರಂಪಾಟ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ವರದಿ, ಮೈಸೂರು:

ಹಣಕ್ಕಾಗಿ ಹೆತ್ತ ಮಗುವನ್ನೇ ಮಾರಾಟ ಮಾಡಿದ್ದ ತಾಯಿ, 7 ತಿಂಗಳ ಬಳಿಕ ತನ್ನ ಮಗುವನ್ನು ವಾಪಸ್ ನೀಡುವಂತೆ ಖರೀದಿಸಿದ್ದವರಿಗೆ ಒತ್ತಾಯಿಸಿ, ರಂಪಾಟ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯ ಟೈಗರ್ ಬ್ಲಾಕ್‌ನ ಅಲೆಮಾರಿ ಸಮುದಾಯದ ಅಂಬರೀಶ್ ಮತ್ತು ಮಧುಮಾಲತಿ ಎಂಬ ದಂಪತಿ, ಆನ್ ಲೈನ್‌ನಲ್ಲಿ ತಲೆಕೂದಲು ಮಾರಾಟ ಮಾಡುವಾಗ ಬೆಂಗಳೂರಿನ ರೋಜಾ ಎಂಬ ಮಹಿಳೆ ಪರಿಚಯವಾಗಿದ್ದಾಳೆ.
ಆಕೆಯೊಂದಿಗೆ ಮೊಬೈಲ್‌ನಲ್ಲಿಯೇ ಸಂಭಾಷಣೆ ನಡೆಸಿದಾಗ, ಆಕೆ ತನಗಿಷ್ಟವಾದ ಹೆಣ್ಣು ಮಗು ಜನನವಾಗಲಿಲ್ಲ, ಗಂಡು ಮಗು ಹುಟ್ಟಿದೆ, ಅದು ನನಗೆ ಬೇಕಾಗಿಲ್ಲ ಎಂದು ಹೇಳಿದ್ದಾರೆ. ಈ ಮೊದಲೇ ಅಂಬರೀಶ ಮತ್ತು ಮಧುಮಾಲತಿ ಮಕ್ಕಳಿರಲಿಲ್ಲ. ಇನ್ನು ಮಕ್ಕಳಾಗುವುದು ಕಷ್ಟ ಎಂದು ವೈದ್ಯರು ಹೇಳಿದ್ದರು. ಈ ವೇಳೆ ಅನಾಥ ಮಗುವನ್ನು ಸಾಕಲು ಇಬ್ಬರು ಚಿಂತಿಸಿದ್ದರು. ಇದನ್ನು ರೋಜಾ ಬಳಿ ಹೇಳಿದ್ದರು. ಆಗ ಆಕೆ ತನ್ನ ಗಂಡು ಮಗವನ್ನು ನಿಮಗೆ ಕೊಡುವುದಾಗಿ ಹೇಳಿದಳು. ಕೊಡಲು ಹಣಕ್ಕಾಗಿ ಚೌಕಾಸಿ ಮಾಡಿ ಕೊನೆಗೆ 1.5 ಲಕ್ಷ ರೂಗೆ ತನ್ನ ಮಗುವನ್ನು ಮಾರಾಟ ಮಾಡಿದ್ದಾಳೆ. ಆ ಮಗುವನ್ನು ಹಣ ನೀಡಿ ಖರೀದಿಸಿದ ಅಂಬರೀಶ್ ಮತ್ತು ಮಧುಮಾಲತಿ ದಂಪತಿ, ಕಳೆದ 7 ತಿಂಗಳಿoದ ಆ ಮಗುವಿನ ಲಾಲನೆ, ಪಾಲನೆ, ಪೋಷಣೆ ಮಾಡುತ್ತಿದ್ದರು. ತಮ್ಮದೇ ಮಗು ಎಂಬoತೆ ಸಾಕುತ್ತಿದ್ದರು.
ಆದರೆ, ಮಗು ಮಾರಾಟ ಮಾಡಿದ್ದ ರೋಜಾ, ಏಳು ತಿಂಗಳ ಬಳಿಕ ತನ್ನ ಗಂಡು ಮಗುವನ್ನು ವಾಪಸ್ ನೀಡುವಂತೆ ರೋಜಾ, ಅಂಬರೀಶ್ ಮತ್ತು ಮಧುಮಾಲತಿ ದಂಪತಿಗೆ ದುಂಬಾಲು ಬಿದ್ದಿದ್ದಾಳೆ. ಆದರೆ ಮಗುವನ್ನು ಕೊಡಲು ದಂಪತಿ ನಿರಾಕರಿಸಿದ್ದಾರೆ. ಆದರೆ ತನ್ನ ಮಗು ತನಗೆ ಬೇಕೆಂದು ಪಟ್ಟು ಹಿಡಿದ ರೋಜಾ ರಂಪಾಟ ಮಾಡಿದ್ದಾಳೆ. ಕೊನೆಗೆ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮಗು ಖರೀದಿ ಮಾಡುವುದು ಅಪರಾಧ ಎಂಬ ಸಂಗತಿಯನ್ನು ಅಂಬರೀಶ್, ಮಧುಮಾಲತಿ ದಂಪತಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಆಗ ಆ ಮಗುವನ್ನು ರೋಜರಿಗೆ ಹಿಂದಿರುಗಿಸಲು ದಂಪತಿ ನಿರ್ಧರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss