ಹಿಂದು ದೇವತೆಗಳ ಚಿತ್ರವಿದ್ದ ಪೇಪರಲ್ಲಿ ಚಿಕನ್‌ ಮಾರಾಟ: ವಿಚಾರಿಸಲು ಹೋದ ಪೊಲೀಸರ ಮೇಲೆ ಹಲ್ಲೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ನಿನ್ನೆಯಷ್ಟೇ ತಮಿಳು ಸಿನಿಮಾ ನಿರ್ದೇಶಕಿತಮ್ಮ ಸಾಕ್ಷ್ಯ ಚಿತ್ರದ ಪೋಸ್ಟರ್‌ನಲ್ಲಿ ಹಿಂದೂ ದೇವತೆ ಕಾಳಿ ಕೈಯಲ್ಲಿ ಸಿಗರೇಟು ಹಿಡಿದು ಸೇದುತ್ತಿರುವಂತೆ ಪೋಸ್ಟರ್‌ ರಿಲೀಸ್ ಮಾಡಿದ್ದಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದರು. ಇದೀಗ ಈ ಘಟನೆ ಮಾಸುವ ಮುನ್ನವೇ ಈಗ ಉತ್ತರಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕೋಳಿ ಮಾಂಸದ ತುಂಡುಗಳನ್ನು ಹಿಂದೂ ದೇವತೆಗಳ ಚಿತ್ರವಿದ್ದ ಪೇಪರ್‌ನಲ್ಲಿ ಸುತ್ತಿ ಗ್ರಾಹಕರಿಗೆ ನೀಡಿದ್ದಾನೆ.
ಈ ಸಂಬಂಧ ವಿಚಾರಣೆಗೆ ಬಂದ ಪೊಲೀಸರ ಮೇಲೂ ಆತ ಹಲ್ಲೆ ನಡೆಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಉತ್ತರಪ್ರದೇಶದ ಸಂಭಾಲ್‌ನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ತಾಲೀಬ್ ಹುಸೇನ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಈತ ಮಾಂಸ ಮಾರಾಟ ಮಾಡುತ್ತಿದ್ದು, ಚಿಕನ್‌ ತುಂಡುಗಳನ್ನು ಹಿಂದೂ ದೇವತೆಗಳ ಚಿತ್ರವಿದ್ದ ಪೇಪರ್‌ನಲ್ಲಿ ಸುತ್ತಿ ಗ್ರಾಹಕರಿಗೆ ನೀಡಿದ್ದೇನೆ. ಇದನ್ನು ಗಮನಿಸಿದ ಗ್ರಾಹಕರು ಪೊಲೀಸರಿಗೆ ದೂರು ನೀಡಿದ್ದಾರೆ. ಚಿಕನ್ ತುಂಡುಗಳನ್ನು ಹಿಂದೂ ದೇವತೆಗಳ ಚಿತ್ರವಿರುವ ಪೇಪರ್‌ನಲ್ಲಿ ಮಾರುವ ಮೂಲಕ ಆತ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾನೆ ಎಂದು ಕೆಲವರು ದುರು ನೀಡಿದ್ದಾರೆ .
ಪೊಲೀಸ್‌ ಮೇಲೆ ಹಲ್ಲೆ
ಬಳಿಕ ಪೊಲೀಸ್‌ ತಂಡ ಆತನ ಮಾಂಸದ ಅಂಗಡಿ ಇರುವ ಸ್ಥಳಕ್ಕೆ ತೆರಳಿದ್ದು, ಈ ವೇಳೆ ಪೊಲೀಸರ ಮೇಲೆಯೇ ಆತ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತಾಲಿಬ್ ಹುಸೇನ್ ವಿರುದ್ಧ ಐಪಿಸಿ ಸೆಕ್ಷನ್ 153-ಎ [ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು], 295-ಎ [ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಅವಮಾನಿಸುವ ಮೂಲಕ ಆಕ್ರೋಶಗೊಳಿಸುವ ಉದ್ದೇಶ,(ಧರ್ಮ ಅಥವಾ ಧಾರ್ಮಿಕ ನಂಬಿಕೆಗಳು] ಮತ್ತು 307 [ಕೊಲೆಯ ಪ್ರಯತ್ನ].ಈ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!