ಹೊಸದಿಗಂತ ವರದಿ,ಮುಂಡಗೋಡ :
ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಪೊಲೀಸರು ದಾಳಿ ಮಾಡಿ 80 ಸಾವಿರ ಬೆಲೆ ಬಾಳುವ 2 ಕೆ.ಜಿ ಗಾಂಜಾ ಸೇರಿದಂತರ ಆರೋಪಿಯನ್ನು ಬಂಧಿಸಿದ ಘಟನೆ ಶನಿವಾರ ತಾಲೂಕಿನ ದಾಸನಕೊಪ್ಪ ರಸ್ತೆಯ ಧರ್ಮಾ ಜಲಾಶಯ ಹತ್ತಿರ ಜರುಗಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದ ಸಲ್ಮಾನಖಾನ್ ಆಲೂರ (24) ಬಂಧಿತ ಆರೋಪಿಯಾಗಿದ್ದಾನೆ.
ಈತನು ತಾಲೂಕಿನ ಮಳಗಿ ಗ್ರಾಮ ಪಂಚಾಯತ ವ್ಯಾಪ್ತಿಯ ದಾಸನಕೊಪ್ಪ ರಸ್ತೆಯ ಧರ್ಮಾ ಜಲಾಶಯ ಹತ್ತಿರ ಕೇಸರಿ ಬಣ್ಣದ ಕೈ ಚೀಲದಲ್ಲಿ 2 ಕೆ.ಜಿ 28 ಗ್ರಾಂ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದನು ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿ ಸಹಿತ 80 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಸಿಪಿಐ ಬಿ.ಎಸ್. ಲೋಕಾಪುರ ನಿರ್ದೇಶನದಂತೆ ಪಿಎಸ್ ಐಗಳಾದ ಯಲ್ಲಾಲಿಂಗ ಕುನ್ನೂರ ಮತ್ತು ಹನಮಂತ ಕುಡಗುಂಟಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಗಣಪತಿ ಹೊನ್ನಳ್ಳಿ, ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬಡಗೇರ, ಬಸವರಾಜ ಲಮಾಣಿ, ಸಂಜು ರಾಠೋಡ ಗುರುರಾಜ ಬಿ ಸೇರಿದಂತೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.