ಬಹಳ ಬೇಗ ಮಾಡಬಹುದಾದ ಶ್ಯಾವಿಗೆ ಉಪ್ಪಿಟ್ಟು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಪದಾರ್ಥಗಳು

1 1/4 ಕಪ್ ಶ್ಯಾವಿಗೆ, 1/4 ಕಪ್ ಬಾಂಬೆ ರವಾ
2 ಚಮಚ ಎಣ್ಣೆ, 2 ಚಮಚ ತುಪ್ಪ
ಈರುಳ್ಳಿ , 4 ಹಸಿರು ಮೆಣಸಿನಕಾಯಿ,
ಕ್ಯಾರೆಟ್, ಫ್ರೆಂಚ್ ಬೀನ್ಸ್, ಬಟಾಣಿ, ಟೊಮ್ಯಾಟೊ
1 ಟೀಸ್ಪೂನ್ ಸಾಸಿವೆ, ಜೀರಿಗೆ,
ಕಡಲೆಬೇಳೆ, ಗೋಡಂಬಿ, ಉದ್ದಿನಬೇಳೆ,
ಉಪ್ಪು,  ಪುದೀನ, ಕೊತ್ತಂಬರಿ ಪುಡಿ, ನಿಂಬೆ ರಸ

ಮಾಡುವ ವಿಧಾನ:

ಬಾಣಲೆಗೆ ತುಪ್ಪ ಹಾಕಿ ಶ್ಯಾವಿಗೆ ಸ್ವಲ್ಪ ಮಟ್ಟಿಗೆ ಹುರಿದುಕೊಳ್ಳಿ, ಅದಕ್ಕೆ ರವೆ ಸೇರಿಸಿ ಕಂದು ಬಣ್ಣಕ್ಕೆ ಬಂದ ಮೇಲೆ ಒಂದು ತಟ್ಟೆಗೆ ಸುರಿಯಿರಿ. ಒಂದು ಪಾತ್ರೆಗೆ ಎಣ್ಣೆ ಹಾಕಿ ಗೋಡಂಬಿ ಹುರಿಯಿರಿ ಅದಕ್ಕೆ ಜೀರಿಗೆ, ಸಾಸಿವೆ, ಕರಿಬೇವು, ಹಸಿಮೆಣಸು ಹಾಕಿ ಹುರಿಯಿರಿ. ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಮೆತ್ತಗಾಗುವ ಹಾಗೆ ಬಾಡಿಸಿ. ನಂತರ ಕ್ಯಾರೆಟ್‌, ಬೀನ್ಸ್‌, ಬಟಾಣಿ, ಟೊಮ್ಯಾಟೊ ಹಾಕಿ ಸ್ವಲ್ಪ ಸಮಯ ಬೇಯಿಸಿ ಬಳಿಕ ಅಗತ್ಯವಿರುವ ನೀರು, ಉಪ್ಪು ಹಾಕಿ ನೀರನ್ನು ಚೆನ್ನಾಗಿ ಕುದಿಸಿ ಹುರಿದಿಟ್ಟ ಶ್ಯಾವಿಗೆ ಹಾಕಿ ನೀರು ಹೀರುವವರೆಗೆ ಬೇಯಿಸಿ. ತಳ ಹಿಡಿಯದಂತೆ ಆಗಾಗ ತಿರುವುತ್ತಿರಬೇಕು. ಕೊನೆಗೆ ತುಪ್ಪ, ಕೊತ್ತಂಬರಿ, ಪುದೀನಾ ಹಾಕಿ ಕಲಕಿ. ಕೊನೆಗೆ ನಿಂಬೆರಸ ಹಿಂಡಿ ಸವಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!