ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, June 24, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

‘ನನಗೆ ವಿವರಗಳನ್ನು ಕಳುಹಿಸಿ ಸಹೋದರ, 10 ನಿಮಿಷದಲ್ಲಿ ಆಕ್ಸಿಜನ್​ ಕಳುಹಿಸುತ್ತೇನೆ’: ಸುರೇಶ ರೈನಾಗೆ ನೆರವಾದ ಸೋನು ಸೂದ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಕೊರೋನಾ ಪ್ರಮಾಣ ಏರಿಕೆಯಾಗುತ್ತಿದ್ದು, ಇತ್ತ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಅಧಿಕವಾಗುತ್ತಿದೆ. ಇದೀಗ ಈ ಸಮಯದಲ್ಲಿ ಕ್ರಿಕೆಟಿಗ ಸುರೇಶ್ ರೈನಾ ಕೂಡ ಆಕ್ಸಿಜನ್​ಗಾಗಿ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೆ ಇಟ್ಟಿದ್ದಾರೆ.
ಸುರೇಶ್ ರೈನಾ ಅವರ 65 ವರ್ಷದ ಚಿಕ್ಕಮ್ಮಸೋಂಕಿಗೆ ಒಳಗಾಗಿದ್ದಾರೆ. ಹೀಗಾಗಿ ಅವರಿಗೆ ಆಕ್ಸಿಜನ್ ಸಿಲಿಂಡರ್‌ನ ಅವಶ್ಯಕತೆಯಿದೆ, ಅವರನ್ನು ಪ್ರಸ್ತುತ ಮೀರತ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರೇಶ್ ರೈನಾ ಅವರೇ ಟ್ವೀಟ್ ಮಾಡಿ, ರಾಜ್ಯದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಜನರ ಸಹಾಯ ಕೋರಿದ್ದಾರೆ. ನನಗೆ ತುರ್ತಾಗಿ ಆಕ್ಸಿಜನ್​ ಬೇಕಾಗಿದೆ ಯಾರಾದರೂ ಸಹಾಯ ಮಾಡುತ್ತೀರಾ ಎಂದು ಕೇಳಿಕೊಂಡಿದ್ದಾರೆ.
ಕೊರೊನಾ ರೈನಾ ಅವರ ಚಿಕ್ಕಮ್ಮನನ್ನು ತುಂಬಾ ಪೀಡಿಸಿದೆ ಮತ್ತು ಅವರಲ್ಯಾಂಗ್ಸ್ನಲ್ಲಿ ಭಾರಿ ಸೋಂಕು ಕಂಡುಬಂದಿದೆ. ಅವರ ಆಮ್ಲಜನಕದ ಮಟ್ಟ ಕುಸಿದಿದೆ. ಅವರು ಆಕ್ಸಿಜನ್ ಬೆಂಬಲದೊಂದಿಗೆ ಆಮ್ಲಜನಕದ ಪ್ರಮಾಣ 91 ಮತ್ತು ಬೆಂಬಲವಿಲ್ಲದೆ 70 ಇದೆ. ಭಾರತದಲ್ಲಿ, ಯುಪಿ ದೇಶ ಹೆಚ್ಚು ಸೋಂಕಿತ ರಾಜ್ಯಗಳಲ್ಲಿ ಒಂದಾಗಿದೆ. ಪ್ರತಿದಿನ ಸುಮಾರು 250 ಜನರು ಕೊರೊನಾದಿಂದ ಸಾಯುತ್ತಿದ್ದಾರೆ ಮತ್ತು 30000 ಹೊಸ ಪ್ರಕರಣಗಳು ಹೊರಬರುತ್ತಿವೆ.
ರೈನಾ ಅವರ ಟ್ವೀಟ್ ನಂತರ, ನಟ ಸೋನು ಸುದ್ ಶೀಘ್ರವಾಗಿ ಸಹಾಯಕ್ಕೆ ಮುಂದಾಗಿದ್ದು, ಸೋನು ಸೂದ್ ರೈನಾ ಟ್ವೀಟ್​ಗೆ ನನಗೆ ವಿವರಗಳನ್ನು ಕಳುಹಿಸಿ ಸಹೋದರ, ನಾನು ಸಿಲಿಂಡರ್ ಅನ್ನು ತಲುಪಿಸುತ್ತೇನೆ ಎಂದು ರೀಟ್ವೀಟ್ ಮಾಡಿದ್ದಾರೆ. ರೈನಾ ಅವರಿದ್ದ ವಿವರ ಸಿಕ್ಕ ಬಳಿಕ ಮತ್ತೊಂದು ಟ್ವೀಟ್​ ಮಾಡಿರುವ ಸೋನು ಸೂದ್​, ಇನ್ನ 10 ನಿಮಿಷದಲ್ಲಿ ಆಕ್ಸಿಜನ್​ ನಿಮ್ಮ ಜಾಗಕ್ಕೆ ತಲುಪುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss