ಕೇರಳದಲ್ಲಿ ಇನ್ನು ‘ಬಾಲಕರ’, ‘ಬಾಲಕಿಯರ’ ಪ್ರತ್ಯೇಕ ಶಾಲೆ ವ್ಯವಸ್ಥೆ ಬಂದ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ಇನ್ನು ಬಾಲಕ, ಬಾಲಕಿಯರಿಗಾಗಿ ಪ್ರತ್ಯೇಕ ಶಾಲೆಗಳು ಕಾರ್ಯಾಚರಿಸುವುದಿಲ್ಲವೇ? ಹೌದು, ಇನ್ನು ಮುಂದೆ ಇದರ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಮಕ್ಕಳ ಹಕ್ಕು ಆಯೋಗ ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು, ಮುಂದಿನ ಮೂರು ತಿಂಗಳೊಳಗೆ ಪ್ರಗತಿ ವರದಿ ಸಲ್ಲಿಸಬೇಕು ಎಂದು ಅದು ಸೂಚಿಸಿದೆ.

ಈ ಪ್ರಸ್ತಾವನೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಧರಿಸಿದೆ ಎಂದಿರುವ ಆಯೋಗ, ರಾಜ್ಯದ ಎಲ್ಲಾ ಶಾಲೆಗಳನ್ನು ಮಿಶ್ರ ಶಾಲೆಗಳನ್ನಾಗಿ ಪರಿವರ್ತಿಸಿ ಸಹಶಿಕ್ಷಣವನ್ನು ಜಾರಿಗೊಳಿಸಬೇಕು. ಇದಕ್ಕೂ ಮುನ್ನ ಶಾಲೆಗಳಲ್ಲಿ ಶೌಚಾಲಯ ಸೇರಿದಂತೆ ಭೌತಿಕ ಸ್ಥಿತಿಗತಿ ಸುಧಾರಿಸಬೇಕು ಎಂದು ಸೂಚಿಸಿದೆ.

ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶಾಲೆ ನಡೆಸುವ ಮೂಲಕ ಲಿಂಗ ತಾರತಮ್ಯ ನಡೆಸಲಾಗುತ್ತಿದೆ ಎಂದು ಸಲ್ಲಿಕೆಯಾಗಿರುವ ಅರ್ಜಿಯ ಮೇರೆಗೆ ಆಯೋಗ ಈ ಆದೇಶ ನೀಡಿದೆ. ಕೇರಳದಲ್ಲಿ ಸಧ್ಯ 280 ಬಾಲಕಿಯರ, 164 ಬಾಲಕರ ಶಾಲೆಗಳು ಕಾರ್ಯಚರಿಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!