ಪ್ರತಿ ತಿಂಗಳಲ್ಲಿ ಹುಟ್ಟಿದವರಿಗೂ ವಿಭಿನ್ನ ಗುಣಗಳು ಇರುತ್ತವೆ. ಒಂದೇ ತಿಂಗಳಿನಲ್ಲಿ ಹುಟ್ಟಿದ ಇಬ್ಬರ ಗುಣಗಳನ್ನು ಕಂಪೇರ್ ಮಾಡಿದರೆ ಅಲ್ಪವಾದರೂ ಕಾಮನ್ ಗುಣಗಳು ಇದ್ದೇ ಇರುತ್ತವೆ. ಸೆಪ್ಟೆಂಬರ್ನಲ್ಲಿ ಹುಟ್ಟಿದವರನ್ನು ಹೆಚ್ಚಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಇದನ್ನು ಓದಿ…
- ಇವರು ಜಾಣರು, ಶಾಲೆಯಲ್ಲಿ ಇವರ ಹೆಸರಿನಲ್ಲಿ ದೂರುಗಳಿಲ್ಲ. ಓದುತ್ತಾ, ಕೊಟ್ಟ ಕೆಲಸವನ್ನು ಮಾಡುತ್ತಾರೆ.
- ಇವರು ಕೃಶಕಾಯರಾಗಿರುತ್ತಾರೆ. ಎಷ್ಟು ತಿಂದರೂ, ಏನೇ ಮಾಡಿದರೂ ದಪ್ಪ ಆಗೋದಿಲ್ಲ.
- ಇವರಿಗೆ ಕ್ರೀಡೆ ಅಂದರೆ ತುಂಬಾನೇ ಇಷ್ಟ. ಆಟ ಆಡೋದಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ.
- ಇವರ ಮೂಳೆಗಳು ತುಂಬಾನೇ ಗಟ್ಟಿಯಾಗಿ ಇರುತ್ತವಂತೆ, ಇವರಿಗೆ ಮೂಳೆಗೆ ಸಂಬಂಧಿಸಿದ ಕಾಯಿಲೆಗಳು ಬರೋದಿಲ್ಲ.
- ಇವರಿಗೆ ಹೆಚ್ಚು ಅಲರ್ಜಿ ಅಥವಾ ಅಸ್ತಮಾ ಸಮಸ್ಯೆ ಎದುರಾಗುತ್ತದೆ.
- ನೂರು ವರ್ಷದವರೆಗೂ ಇವರು ಬಾಳುತ್ತಾರಂತೆ, ನೂರು ವರ್ಷ ಬದುಕಿರುವ ಹೆಚ್ಚು ಮಂದಿ ಸೆಪ್ಟೆಂಬರ್ನಲ್ಲಿ ಹುಟ್ಟಿದ್ದಾರೆ.
- ಬೇರೆಯವರಿಗೆ ಕ್ರಿಟಿಸೈಸ್ ಮಾಡುತ್ತಾರೆ. ತಿದ್ದಿ ಬುದ್ಧಿ ಹೇಳುವುದು ಇವರ ಅಭ್ಯಾಸ.
- ಭಾವನೆಗಳನ್ನು ಹೊರಹಾಕುವುದಿಲ್ಲ. ಎಲ್ಲವನ್ನೂ ಮನಸ್ಸಿನಲ್ಲೇ ಇಟ್ಟುಕೊಳ್ಳುತ್ತಾರೆ.
- ನೀವು ಇವರ ಬಳಿ ಬಾಯ್ಬಿಟ್ಟು ವಿಷಯಗಳನ್ನು ಹೇಳಬೇಕಾಗಿಲ್ಲ. ಅವರು ಮುಂಚೆಯೇ ಅರ್ಥಮಾಡಿಕೊಳ್ಳುತ್ತಾರೆ.
- ಒಂದು ಸಂಬಂಧ ಬೆಳೆಸಲು ನೂರು ಬಾರಿ ಆಲೋಚಿಸುತ್ತಾರೆ. ಸ್ನೇಹಿತರನ್ನು ದುರ್ಬಿನು ಹಾಕಿ ಆರಿಸುತ್ತಾರೆ.
- ಎಂತಹ ಸನ್ನಿವೇಶ ಬಂದರೂ ಇವರು ತಾಳ್ಮೆ ಕಳೆದುಕೊಳ್ಳುವುದಿಲ್ಲ.