ಸರ್ಬಿಯಾ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದ ಬಾಲಕ: 8 ವಿದ್ಯಾರ್ಥಿಗಳು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಲ್‌ಗ್ರೇಡ್ ತರಗತಿಯೊಂದರಲ್ಲಿ 14ರ ಹರೆಯದ ಬಾಲಕನೊಬ್ಬ ಬುಧವಾರ ಬೆಳಗ್ಗೆ ತನ್ನ ಶಿಕ್ಷಕ, ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದು, ಎಂಟು ವಿದ್ಯಾರ್ಥಿಗಳು ಮತ್ತು ಒಬ್ಬ ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ಸರ್ಬಿಯಾದ ಆಂತರಿಕ ಸಚಿವಾಲಯ ತಿಳಿಸಿದೆ.

ವ್ಲಾಡಿಸ್ಲಾವ್ ರಿಬ್ನಿಕರ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯೊಬ್ಬಳ ತಂದೆ ಮಿಲನ್ ಮಿಲೋಸೆವಿಕ್, ತನ್ನ ಮಗಳು ಗುಂಡಿನ ದಾಳಿ ನಡೆದ ತರಗತಿಯಲ್ಲಿದ್ದಾಳೆ ಎಂದು ಹೇಳಿದರು. ಅವಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದಳು. ಆ ಬಾಲಕ ಮೊದಲು ಶಿಕ್ಷಕರಿಗೆ ಗುಂಡು ಹಾರಿಸಿದ. ನಂತರ ಎಲ್ಲರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಮಿಲೋಸೆವಿಕ್ ಬ್ರಾಡ್ಕಾಸ್ಟರ್ N1 ಗೆ ಹೇಳಿದ್ದಾರೆ.

ಎಂಟು ಮಕ್ಕಳು ಮತ್ತು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಶಿಕ್ಷಕರೊಂದಿಗೆ ಆರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಂತರಿಕ ಸಚಿವಾಲಯದ ಹೇಳಿಕೆ ತಿಳಿಸಿದೆ. ಏಳನೇ ತರಗತಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಲ್ಮೆಟ್ ಮತ್ತು ಬುಲೆಟ್ ಪ್ರೂಫ್ ಹೊಂದಿದ್ದ ಅಧಿಕಾರಿಗಳು ಶಾಲೆಯ ಸುತ್ತ ಮುತ್ತಲಿನ ಪ್ರದೇಶವನ್ನು ಸುತ್ತುವರಿದಿದ್ದರು.
ಮಕ್ಕಳು ಶಾಲೆಯಿಂದ ಹೊರಗೆ ಓಡಿಹೋಗುವುದನ್ನು ನಾನು ನೋಡಿದೆ. ಅವರು ಕಿರುಚುತ್ತಿದ್ದರು. ಪೋಷಕರು ಕೂಡಾ ಭಯಭೀತರಾಗಿದ್ದರು. ನಂತರ ನಾನು ಮೂರು ಗುಂಡಿನ ಸದ್ದು ಕೇಳಿದೆ ಎಂದು ವ್ಲಾಡಿಸ್ಲಾವ್ ರಿಬ್ನಿಕರ್ ಪಕ್ಕದ ಪ್ರೌಢಶಾಲೆಗೆ ಹಾಜರಾಗುವ ಹುಡುಗಿಯೊಬ್ಬರು ರಾಜ್ಯ ಟಿವಿ ಆರ್‌ಟಿಎಸ್‌ಗೆ ತಿಳಿಸಿದರು.
ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಗುಂಡಿನ ದಾಳಿಯ ಹಿಂದಿನ ಉದ್ದೇಶಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!