ರಾಜ್ಯದಲ್ಲಿ ಸರಣಿ ಆತ್ಮಹತ್ಯೆ, ಬಾಣಂತಿಯರ ಸಾವು: ಬಿಜೆಪಿಯಿಂದ ಸಮಿತಿ ರಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಸರಣಿ ಆತ್ಮಹತ್ಯೆ ಪ್ರಕರಣಗಳು, ಬಾಣಂತಿಯರ ಸಾವಿನ ಕುರಿತಂತೆ ಬಿಜೆಪಿಯಿಂದ ಆಂದೋಲನ ಸಮಿತಿ ಹಾಗೂ ಸತ್ಯ ಶೋಧನಾ ಸಮಿತಿಯನ್ನು ರಚಿಸಲಾಗಿದೆ. ಈ ತಂಡವು ರಾಜ್ಯಾಧ್ಯಂತ ಸಂಚರಿಸಿ ವರದಿಯನ್ನು ಸಂಗ್ರಹಿಸಿ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಲ್ಲಿಸಲಿದೆ.

ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಸರಣಿ ಆತ್ಮಹತ್ಯೆಗೆ ಕಾರಣವಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಈ ಕೆಳಕಂಡ ಪ್ರಮುಖರನ್ನು ಒಳಗೊಂಡ ಆಂದೋಲನ ಸಮಿತಿಯನ್ನು ರಚಿಸಲಾಗಿರುತ್ತದೆ ಎಂದಿದ್ದಾರೆ.

ಆಂದೋಲನ ಸಮಿತಿ ತಂಡದ ಪಟ್ಟಿ
ಛಲವಾದಿ ನಾರಾಯಣಸ್ವಾಮಿ – ಪರಿಷತ್ ವಿರೋಧ ಪಕ್ಷದ ನಾಯಕ
ಅರಗ ಜ್ಞಾನೇಂದ್ರ, ಶಾಸಕರು
ಎನ್ ಮಹೇಶ್, ರಾಜ್ಯ ಉಪಾಧ್ಯಕ್ಷರು
ಅಶ್ವತ್ಥನಾರಾಯಣ, ಮುಖ್ಯ ವಕ್ತಾರರು
ಬಸವರಾಜ ಮತ್ತಿಮೂಡ್, ಶಾಸಕರು
ಎನ್ ರವಿಕುಮಾರ್, ವಿಧಾನ ಪರಿಷತ್ ಸದಸ್ಯರು
ಕೆ ಎನ್ ನವೀನ್, ಎಂಎಲ್ಸಿ
ರಾಜುಗೌಡ, ಮಾಜಿ ಸಚಿವರು
ಭಾರತಿ ಶೆಟ್ಟಿ, ಎಂಎಲ್ಸಿ
ಹೇಮಲತಾ ನಾಯಕ್, ಎಂಎಲ್ಸಿ
ಲಲಿತಾ ಅನಪೂರ್, ರಾಜ್ಯ ಕಾರ್ಯದರ್ಶಿ
ಚಂದು ಪಾಟೀಲ್, ಜಿಲ್ಲಾಧ್ಯಕ್ಷರು
ಭಾಸ್ಕರ್ ರಾವ್, ವಕ್ತಾರರು
ವೆಂಕಟೇಶ ದೊಡ್ಡೇರಿ, ವಕ್ತಾರರು
ವಸಂತ ಕುಮಾರ್, ರಾಜ್ಯ ಸಂಚಾಲಕರು, ಕಾನೂನು ಪ್ರಕೋಷ್ಟ
ಕರುಣಾಕರ್ ಖಾಸಲೆ, ರಾಜ್ಯ ಸಂಚಾಲಕರು, ಮಾಧ್ಯಮ ವಿಭಾಗ

ಇನ್ನೂ ರಾಜ್ಯಾದ್ಯಂತ ಆಗುತ್ತಿರುವ ಬಾಣಂತಿಯರ ಹಾಗೂ ನವಜಾತ ಶಿಶುಗಳ ಸಾವುಗಳ ಕುರಿತು ಈ ಕೆಳಕಂಡ ಪ್ರಮುಖರನ್ನೊಳಗೊಂಡ ಸತ್ಯ ಶೋಧನಾ ತಂಡವನ್ನು ರಚಿಸಲಾಗಿದೆ. ಈ ತಂಡದ ಪ್ರಮುಖರು ಸಮಗ್ರ ವರದಿಯನ್ನು ನೀಡಲು ನಿರ್ದೇಶಿಸಲಾಗಿದೆ.

ಸತ್ಯಶೋಧನಾ ತಂಡದ ಸದಸ್ಯರ ಪಟ್ಟಿ
ಡಾ.ಶೈಲೇಂದ್ರ ಬೆಲ್ದಾಳೆ, ಶಾಸಕರು
ಡಾ.ಅವಿನಾಶ್ ಜಾಧವ್, ಶಾಸಕರು
ಡಾ.ಚಂದ್ರು ಲಮಾಣಿ, ಶಾಸಕರು
ಡಾ.ಬಸವರಾಜ್ ಕೇಲಗಾರ, ರಾಜ್ಯ ಉಪಾಧ್ಯಕ್ಷರು
ಡಾ.ಲಕ್ಷ್ಮೀ ಅಶ್ವಿನ್ ಗೌಡ, ರಾಜ್ಯ ಕಾರ್ಯದರ್ಶಿಗಳು
ಡಾ.ನಾರಾಯಣ್, ರಾಜ್ಯ ಸಂಚಾಲಕರು, ವೈದ್ಯಕೀಯ ಪ್ರಕೋಷ್ಠ
ಡಾ.ಅರುಣಾ, ಜಿಲ್ಲಾ ಉಪಾಧ್ಯಕ್ಷರು
ವಿಜಯಲಕ್ಷ್ಮೀ ಕರೂರು, ರಾಜ್ಯ ಖಜಾಂಚಿ, ಮಹಿಳಾ ಮೋರ್ಚಾ
ಡಾ.ಪದ್ಮ ಪ್ರಕಾಶ್, ಮಾಜಿ ರಾಜ್ಯ ಉಪಾಧ್ಯಕ್ಷರು, ಮಹಿಳಾ ಮೋರ್ಚಾ
ಡಾ.ವಿಜಯಲಕ್ಷ್ಮೀ ಬಾ ತುಂಗಳ, ರಾಜ್ಯ ಉಪಾಧ್ಯಕ್ಷರು, ಮಹಿಳಾ ಮೋರ್ಚಾ
ಡಾ.ಸುಧಾ ಹಲ್ಕಾಯಿ, ಪ್ರಮುಖರು
ರತನ್ ರಮೇಶ್ ಪೂಜಾರಿ, ರಾಜ್ಯ ಮಾಧ್ಯಮ ಸಮಿತಿ ಸದಸ್ಯರು
ಪ್ರದೀಪ್ ಕಡಾಡಿ, ಸಾಮಾಜಿಕ ಜಾಲತಾಣದ ವಿಭಾಗ, ರಾಜ್ಯ ಸಹ ಸಂಚಾಲಕರು
ಸಂಯೋಜಕರಾಗಿ, ಕುಮಾರಿ ಮಂಜುಳಾ, ರಾಜ್ಯ ಅಧ್ಯಕ್ಷರು, ಮಹಿಳಾ ಮೋರ್ಚಾ ಹಾಗೂ ಅಶೋಕ್ ಗೌಡ, ರಾಜ್ಯ ವಕ್ತಾರರನ್ನು ನೇಮಕ ಮಾಡಲಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!