ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸೇರಂನಿಂದ ಯುಕೆಯಲ್ಲಿ ಕೊರೋನಾ ಲಸಿಕೆ ಉತ್ಪಾದನ ಘಟಕ: 2,400 ಕೋಟಿ ರೂ. ಹೂಡಿಕೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪುಣೆಯ ಸೇರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಯುಕೆಯಲ್ಲಿ 2,400 ಕೋಟಿ ರೂ. ವೆಚ್ಚದಲ್ಲಿ ಲಸಿಕೆ ಉತ್ಪಾದನ ಘಟಕ ಸ್ಥಾಪಿಸಲು ಮುಂದಾಗಿದೆ.
ಈ ಬಗ್ಗೆ ನಿನ್ನೆ(ಮಂಗಳವಾರ) ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಪ್ರಧಾನಿ ಮೋದಿಯವರ ವರ್ಜುವಲ್ ಸಭೆಯಲ್ಲಿ ತಿಳಿಸಲಾಗಿದೆ. ಇಲ್ಲಿ ಸುಮಾರು 6,500 ಜನರಿಗೆ ಉದ್ಯೋಗ ದೊರಕಲಿದ್ದು, ಇಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲಾಗುತ್ತದೆ.
ಇದರಿಂದ ಸುಮಾರು 1 ಬಿಲಿಯನ್ ಡಾಲರ್ ವ್ಯಾಪಾರ ಉತ್ಪಾದಿಸುವ ನಿಟ್ಟಿನಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಈಗಾಗಲೇ ಅಮೆರಿಕದಲ್ಲಿ ಕೊಡಾಜೆನಿಕ್ಸ್ ಇಂಕ್ ಸಹಭಾಗಿತ್ವದಲ್ಲಿ ಮೂಗಿನ ಮೂಲಕ ಲಸಿಕೆ ನೀಡುವ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಇದೀಗ ಯುಕೆ ಹಾಗೂ ಭಾರತ ಜಂಟಿಯಾಗಿ ಈ ಲಸಿಕಾ ಉತ್ಪಾದನ ಕೇಂದ್ರ ಸ್ಥಾಪಿಸಲು ಸಿದ್ಧವಾಗುತ್ತಿದೆ.
ಯುಕೆಯಲ್ಲಿ ಹೂಡಿಕೆ ಮಾಡಲು ಮುಂದಾಗಿರುವ ಕಂಪನಿಗಳ ನಿರ್ಧಾರದಿಂದ ತುಂಬಾ ಸಂತೋಷವಾಗಿದೆ. ಇದರಿಂದ ದೇಶದ ಆರೋಗ್ಯ ಕ್ಷೇತ್ರ ಹಾಗೂ ಆರ್ಥಿಕ ವಲಯ ಅಭಿವೃದ್ಧಿ ಕಾಣಲಿದೆ ಎಂದು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss