ಸೊಂಟಕ್ಕೆ ಶಕ್ತಿ ನೀಡುವ ಎಳ್ಳಿನಿಂದ ಮಾಡಿದ ಲಡ್ಡು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಸಾಮಾಗ್ರಿಗಳು :

ಎಳ್ಳು – 100 ಗ್ರಾಂ
ಬೆಲ್ಲ – ಅರ್ಧ ಕೆಜಿ
ತುಪ್ಪ – 50 ಗ್ರಾಂ
ತೆಂಗಿನ ತುರಿ – 1 ಕಪ್
ಏಲಕ್ಕಿ ಪುಡಿ – ಸ್ವಲ್ಪ
ಡ್ರೈ ಫ್ರೂಟ್ಸ್-ಸ್ವಲ್ಪ

ಮಾಡುವ ವಿಧಾನ: 

ಒಲೆಯ ಮೇಲೆ ಚಿಕ್ಕ ಬಾಣಲೆಯನ್ನು ಇಟ್ಟು ಎಣ್ಣೆ, ತುಪ್ಪ ಹಾಕದೆ ಎಳ್ಳನ್ನು ಹುರಿದುಕೊಳ್ಳಿ. ಹುರಿದ ಎಳ್ಳನ್ನು ತರಿತರಿಯಾಗಿ ಕುಟ್ಟಿಕೊಳ್ಳಿ.
ಈಗ ಅದೇ ಬಾಣಲೆಯಲ್ಲಿ ಪುಡಿಮಾಡಿದ ಬೆಲ್ಲ ಮತ್ತು ನೀರನ್ನು ಸೇರಿಸಿ ಮತ್ತು ಪಾಕ ತಯಾರಿಸಿ. (ಒಂದು ಕಪ್ ತುರಿದ ಬೆಲ್ಲಕ್ಕೆ ಒಂದು ಕಪ್ ನೀರು ಬೇಕು) ಪಾಕ ಹದವಾಗಿ ಬಂದ ಕೂಡಲೇ ಅದಕ್ಕೆ ಏಲಕ್ಕಿ ಪುಡಿ, ತೆಂಗಿನ ತುರಿ ಮತ್ತು ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ.

ಸ್ವಲ್ಪ ಸಮಯದ ನಂತರ ಈ ಪೇಸ್ಟ್‌ಗೆ ಪುಡಿಮಾಡಿದ ಎಳ್ಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ ತಕ್ಷಣ ಸ್ಟವ್ ಆಫ್ ಮಾಡಿ.
ಈ ಮಿಶ್ರಣ ತಣ್ಣಗಾದ ಬಳಿಕ ಸಣ್ಣ ಉಂಡೆಗಳನ್ನು ಮಾಡಿ. ನಿಮಗಿಷ್ಟವಾದ ಡ್ರೈ ಫ್ರೂಟ್ಸ್‌ನಿಂದ ಏಲಕ್ಕಿ ಲಡ್ಡುವನ್ನು ಅಲಂಕರಿಸಿ ತಿನ್ನಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!