ಏಳು ಗಂಟೆಗಳ ಸತತ ಕಾರ್ಯಾಚರಣೆ ಯಶಸ್ಸು: ಬಾವಿಗೆ ಬಿದ್ದ ಕಾಡಾನೆ ಕೊನೆಗೂ ರಕ್ಷಣೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಆಳವಾದ ಪಾಳು ಬಾವಿಗೆ ಬಿದ್ದು ದಿಕ್ಕು ತೋಚದೆ ಅಸಹಾಯಕ ಸ್ಥಿತಿಯಲ್ಲಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ ಘಟನೆ ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪೆರಾಜೆ ಕಲ್ಚರ್ಪೆಯಲ್ಲಿ ನಡೆದಿದೆ. ಕಲ್ಚರ್ಪೆಯಲ್ಲಿ ಅಂದಾಜು 20 ವರ್ಷ ಪ್ರಾಯದ ಗಂಡಾನೆಯೊಂದು ಖಾಸಗಿ ಜಮೀನು ಮಾಲಿಕ ರಾಮ ನಾಯ್ಕ ಅವರ ಅರಣ್ಯದಂಚಿನ ತೋಟದ ಬದಿಯಲ್ಲಿದ್ದ 30 ಅಡಿ ಆಳದ ಪಾಳು ಬಾವಿಗೆ ಭಾನುವಾರ ರಾತ್ರಿ 11.30ರ ವೇಳೆಗೆ ಬಿದ್ದಿದ್ದು ಈ ವೇಳೆ … Continue reading ಏಳು ಗಂಟೆಗಳ ಸತತ ಕಾರ್ಯಾಚರಣೆ ಯಶಸ್ಸು: ಬಾವಿಗೆ ಬಿದ್ದ ಕಾಡಾನೆ ಕೊನೆಗೂ ರಕ್ಷಣೆ!