ACCIDENT | ಹರಿಯಾಣದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರಿಯಾಣದ ಅಂಬಾಲಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಏಳು ಮಂದಿ ಮೃತಪಟ್ಟಿದ್ದಾರೆ.

ಯಮುನಾ ನಗರ-ಪಂಚಕುಲ ಹೆದ್ದಾರಿಯಲ್ಲಿ ಟ್ರೇಲರ್ ಟ್ರಕ್ ಹಿಂದಿನಿಂದ ಬಸ್‌ಗೆ ಡಿಕ್ಕಿ ಹೊಡೆದಿದೆ. ಟ್ರೇಲರ್ ಟ್ರಕ್ ಚಾಲಕ ನಿದ್ದೆಗಣ್ಣಿನಲ್ಲಿ ಬಸ್‌ಗೆ ಗುದ್ದಿದ್ದಾನೆ ಎನ್ನಲಾಗಿದೆ.

ಅಪಘಾತವು ಎಷ್ಟು ಭೀಕರವಾಗಿತ್ತೆಂದರೆ ಟ್ರೇಲರ್ ಟ್ರಕ್ ರಾಂಗ್ ಸೈಡ್‌ನಲ್ಲಿ ಪಲ್ಟಿಯಾಗಿದೆ. ಎರಡೂ ವಾಹನ ಚಾಲಕರು ಅಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!