ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಜೈಲು ಸಿಬ್ಬಂದಿಗೆ ಖಾರದ ಪುಡಿ ಎರಚಿ 7 ಜನ ಕೈದಿಗಳು ಎಸ್ಕೇಪ್ ಆಗಿರುವ ಘಟನೆ ಅರುಣಾಚಲ ಪ್ರದೇಶದ ಈಸ್ಟ್ ಸಯಾಂಗ್ ಜಿಲ್ಲೆಯಲ್ಲಿ ನಡೆದಿದೆ.
ಕೈದಿಗಳು ಪರಾರಿಯಾಗುವ ವೇಳೆ 5 ಮಂದಿ ರಕ್ಷಣಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು, ಒಬ್ಬರಿಗೆ ಗಂಭೀರಗಾಯವಾಗಿದೆ.
ಅಭಿಜಿತ್ ಗೊಗಯ್, ತಾರೋ ಹಮಾಮ್, ಕಲೋಮ್ ಅಪಾಂಗ್, ತಲುಮ್ ಪ್ಯಾನ್ಯಿಂಗ್. ಸುಬಾಶ್ ಮೊಂಡಲ್, ರಾಜಾ ತಾಯೆಂಗ್ ಮತ್ತು ಡನಿ ಗಾಮಲಿನಾ ಪರಾರಿಯಾದ ಕೈದಿಗಳು
ಊಟಕ್ಕೆಂದು ಸೆಲ್ಗಳನ್ನು ತೆರೆದಿದ್ದಾಗ ಈ ಘಟನೆ ನಡೆದಿದೆ. ಪರಾರಿಯಾಗಲು ಸಂಚು ರೂಪಿಸಿದ್ದ ಏಳು ಕೈದಿಗಳು ಕೂಡ ಒಂದೇ ಕಡೆ ಸೇರಿದ್ದರು. ನಂತರ ತಮ್ಮ ಪ್ಲಾನ್ ನಂತೆಯೇ ಉಪ್ಪು ಮಿಶ್ರಿತ ಖಾರದ ಪುಡಿ ಎರಚಿ, ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಪರಾರಿಯಾಗಿರು ಕೈದಿಗಳನ್ನು ಸೆರೆಹಿಡಿಯಲು ವಿಶೇಷ ಪೊಲೀಸ್ ತಂಡವನ್ನು ರಚಿಸಿ, ಕಾರ್ಯಾಚರಣೆ ಆರಂಭವಾಗಿದೆ.