spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪಶ್ಚಿಮ ಆಫ್ರಿಕಾ| ವಿಶ್ವ ಸಂಸ್ಥೆಯ 7 ಮಂದಿ ಶಾಂತಿಪಾಲಕರ ಹತ್ಯೆ

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಆಫ್ರಿಕಾದಲ್ಲಿ ಸೇವಾ ಕಾರ್ಯದಲ್ಲಿ ತೊಡಗಿದ್ದ ವಿಶ್ವ ಸಂಸ್ಥೆಯ ಶಾಂತಿಪಾಲನಾ ಪಡೆಯ 7 ಮಂದಿಯನ್ನು ಉಗ್ರರು ಹತ್ಯೆ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ವಿಶ್ವ ಸಂಸ್ಥೆಯ ವಕ್ತಾರ ಸ್ಟಿಫನ್ ಡುಜಾರಿಕ್, ಟೋಗೋದಿಂದ ಪಶ್ಚಿಮ ಆಫ್ರಿಕಾಗೆ ಬಂದಿದ್ದ ಶಾಂತಿಪಾಲನ ತಂಡದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಇದರ ಪರಿಣಾಮ 7 ಮಂದಿ ಶಾಂತಿಪಾಲಕರು ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿಸಿದರು.
ಶಾಂತಿಪಾಲಕರು ಮಾಲಿಯ ಬಾಂಡೈಗ್ರಾ ಪ್ರಾಂತ್ಯದ ಡೌಂಟ್ಜಾದಿಂದ ಸಿವೆರಾಕ್ಕೆ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಸಿವೆರಾ ಬಳಿ ಸುಧಾರಿತಾ ಸ್ಫೋಟಕದಿಂದ ಉಗ್ರರು ವಾಹನವನ್ನು ಸ್ಫೋಟಿಸಿದ್ದಾರೆ.
ಇದು ವಿಶ್ವಸಂಸ್ಥೆಯ ಶಾಂತಿಪಾಲಕರ ಮೇಲೆ ನಡೆದ ಅತಿ ದೊಡ್ಡ ದಾಳಿಯಾಗಿದೆ. ದಾಳಿ ನಡೆಸಿದವರನ್ನು ಪತ್ತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲು ವಿಶ್ವಸಂಸ್ಥೆಯ ಮುಖ್ಯಸ್ಥ ಅಂಟೋನಿಯಾ ಗುಟೇರಸ್ ಮಾಲಿ ಸರ್ಕಾರಕ್ಕೆ ತಿಳಿಸಿದ್ದಾರೆ.
ಈ ವರ್ಷ ಮಾಲಿಯಲ್ಲಿ 19 ಮಂದಿ ಶಾಂತಿಪಾಲಕರ ಹತ್ಯೆಯಾಗಿದ್ದು, ಅವರಲ್ಲಿ ಟೋಗೋದ 8 ಮಂದಿ, ಈಜಿಪ್ಟ್ ನ ಮೂವರು ಸೇರಿದಂತೆ ಐವರಿ ಕೋಸ್ಟ್ ನ ನಾಲ್ವರು, ಚಾಡ್ ನ ನಾಲ್ವರು ಸೇರಿದ್ದಾರೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss