ಲೈಂಗಿಕ ದೌರ್ಜನ್ಯದ ಆರೋಪ: ಮಲಯಾಳಂ ನಟನ ವಿರುದ್ಧ ಪ್ರಕರಣ ದಾಖಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಮಲಯಾಳಂನ ಖ್ಯಾತ ನಟ – ನಿರ್ಮಾಪಕ ವಿಜಯ್ ಬಾಬು ವಿರುದ್ಧ ಪ್ರಕರಣ ದಾಖಲಾಗಿದೆ.
ಏ . 22 ರಂದು ಮಹಿಳೆ ನೀಡಿರುವ ದೂರಿನ ಮೇಲೆ ದಕ್ಷಿಣ ಎರ್ನಾಕುಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಿಳೆ ನೀಡಿದ ದೂರಿನಲ್ಲಿ ನಿರ್ಮಾಪಕ ವಿಜಯ್ ಬಾಬು ನನ್ನ ಮೇಲೆ ಹಲವು ಬಾರಿ ದೈಹಿಕ ಹಲ್ಲೆ ನಡೆದಿದೆ ಅಲ್ಲದೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ತಿಳಿಸಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಿದ್ದಾರೆ.
ಇತ್ತ ತಲೆಮರೆಸಿಕೊಂಡಿದ್ದ ವಿಜಯ್ ಬಾಬು ಫೇಸ್ ಬುಕ್ ಲೈವ್ ನಲ್ಲಿ ತಾನು ನಿರಪರಾಧಿ ಈ ಪ್ರಕರಣದಲ್ಲಿ ನಿಜವಾದ ಸಂತ್ರಸ್ತ ನಾನು ಎಂದು ಹೇಳಿಕೊಂಡಿದ್ದ ಬಾಬು ದೂರುದಾರೆ ಮಹಿಳೆಯ ಹೆಸರನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ .ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಹಿಳೆ ನೀಡಿದ ದೂರಿನ ಜೊತೆಗೆ ಮಹಿಳೆಯ ಗುರುತನ್ನು ಬಹಿರಂಗಪಡಿಸಿದ ಕುರಿತಾಗಿ ಮತ್ತೊಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೊದಮೊದಲು ಒಳ್ಳೆಯ ಗೆಳೆಯನಂತೆ ನಟಿಸಿ ಲೈಂಗಿಕ ದೌರ್ಜನ್ಯ ಎಸಗಲು ಪ್ರಾರಂಭಿಸಿದರು, ಅಲ್ಲದೆ ಅಮಲು ಪದಾರ್ಥಗಳನ್ನು ನೀಡಿ ನನ್ನ ವಿಡಿಯೋ ಮಾಡಿ ನನಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ನನ್ನಂತೆಯೇ ಇತರ ಮಹಿಳೆಯರು ಇವರ ಬಲೆಯಲ್ಲಿ ಬಿದ್ದಿರಬಹುದು ಎಂಬ ಸಂಶಯ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!