Wednesday, August 17, 2022

Latest Posts

ಬೆಂಗಳೂರಿನಲ್ಲಿರುವ ತಾತನ ಮನೆಯನ್ನು ಮತ್ತೆ ಕಟ್ಟಿಸಲಿದ್ದಾರಾ ಶಾರುಖ್‌ ಖಾನ್?

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:

ಬಾಲಿವುಡ್‌ ಬಾದ್‌ಷಾ ಶಾರುಖ್ ಖಾನ್‌ ನಿನ್ನೆಯಷ್ಟೆ 56ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ಪ್ರಯುಕ್ತ ವಿಚಾರವೊಂದು ಪುನಃ ಪುನಃ ಚರ್ಚೆಯಾಗುತ್ತಿದೆ. ಅದೇನು ಗೊತ್ತಾ?

ಬಾದ್‌ಷಾಗೂ ಕರ್ನಾಟಕಕ್ಕೂ ಭಾರೀ ನಂಟಿದೆ. ಶಾರುಖ್‌ ಬಾಲ್ಯದಲ್ಲಿ 6 ವರ್ಷಗಳ ಕಾಲ ಬೆಂಗಳೂರಿನಲ್ಲಿ ಕಳೆದಿದ್ದರು. ಈ ಬಗ್ಗೆ ಶಾರುಖ್‌ ಅನೇಕ ಸಲ ಹೇಳಿದ್ದಾರೆ ಕೂಡ.

ಹೌದು.. ಶಾರುಖ್‌ ತಾಯಿಯ ತಂದೆ ಇಫ್ತಿಖರ್ ಅವರು ಬೆಂಗಳೂರಿನಲ್ಲಿ ಮುಖ್ಯ ಇಂಜಿನಿಯರ್ ಆಗಿದ್ದರು, ಅವರ ಇಡೀ ಕುಟುಂಬ ಕರ್ನಾಟಕದಲ್ಲಿತ್ತು. ಹಾಗಾಗಿ ಶಾರುಖ್‌ ಕೂಡ ಆಗಾಗ ತಾತನ ಮನೆಗೆ ಹೋಗಿ ಬರ್ತಿದ್ದರು.

ಶಾರುಖ್‌ ಗೆ ಬೆಂಗಳೂರಿನಲ್ಲಿರುವ  ತಾತನ ಮನೆಯನ್ನು ಮತ್ತೆ ಕಟ್ಟುವ ಆಸೆ ಇದೆಯಂತೆ. ಈ ವಿಚಾರವನ್ನು ಅವರು 2015ರಲ್ಲಿಯೇ ಹೊರಹಾಕಿದ್ದರು. ಇದೀಗ ಶಾರುಖ್ ಬರ್ತ್ ಡೇ ಸಮಯದಲ್ಲಿ ಇದೇ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಅಭಿಮಾನಿಗಳು ʼಯಾವಾಗ ತಾತನ ಮನೆಗೆ ಬರುತ್ತೀರಿ, ಮನೆ ಯಾವಾಗ ಕಟ್ಟಿಸುತ್ತೀರೆಂದು” ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!