ಹೊಸದಿಗಂತ ಆನ್ಲೈನ್ ಡೆಸ್ಕ್:
ಆರ್ಯನ್ ಖಾನ್ ಬಂಧನದ ನಂತರ ಶಾರುಖ್ ಖಾನ್ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಮುಂಬೈನ್ ಆರ್ಥರ್ರೋಡ್ ಜೈಲಿಗೆ ತೆರಳಿ ಮಗನನ್ನು ಶಾರುಖ್ ಭೇಟಿಯಾಗಿದ್ದಾರೆ.
ಕ್ರೂಸ್ಶಿಪ್ ಪಾರ್ಟಿಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಆರ್ಯನ್ ಖಾನ್ರನ್ನು ಬಂಧಿಸಲಾಗಿತ್ತು. ಸದ್ಯ ಆರ್ಯನ್ ಆರ್ಥರ್ ರೋಡ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಬಂಧನದ ನಂತರ ಇದೇ ಮೊದಲ ಬಾರಿಗೆ ಶಾರುಖ್ ತಮ್ಮ ಪುತ್ರನನ್ನು ಭೇಟಿಯಾಗಿದ್ದಾರೆ. ಜೈಲಿನಲ್ಲಿ ಸಣ್ಣ ಭೇಟಿ ನಂತರ ಶಾರುಖ್ ವಾಪಾಸಾಗಿದ್ದಾರೆ. ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ಶಾರುಖ್ ನಿರಾಕರಿಸಿದ್ದಾರೆ.