CINE NEWS | ಪಠಾಣ್ ಫ್ಯಾನ್ಸ್‌ನತ್ತ ಕೈ ಬೀಸಿದ ಶಾರುಖ್, ಮನ್ನತ್ ಮುಂದೆ ಜನಜಂಗುಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪಠಾಣ್ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇದೇ ಖುಷಿಯನ್ನು ಸಿನಿಮಾ ಗೆಲ್ಲಿಸಿದ ಫ್ಯಾನ್ಸ್ ಜೊತೆ ಹಂಚಿಕೊಳ್ಳಲು ರೆಡಿಯಾಗಿರುವ ಶಾರುಖ್ ಅಭಿಮಾನಿಗಳತ್ತ ಕೈ ಬೀಸಿ ಧನ್ಯವಾದ ಹೇಳಿದ್ದಾರೆ.

ಮನ್ನತ್‌ನ ಗ್ಯಾಲರಿಗೆ ಶಾರುಖ್ ಬರುವುದು ಅಪರೂಪ. ದಿನವೂ ಶಾರುಖ್ ಖಾನ್ ನೋಡೋದಕ್ಕೆ ಸಾಕಷ್ಟು ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಆದರೆ ಪ್ರತಿದಿನ ಶಾರುಖ್ ಗ್ಯಾಲರಿಗೆ ಬರೋದಿಲ್ಲ. ನಿನ್ನೆ ರಾತ್ರಿ ಗ್ಯಾಲರಿಗೆ ಬಂದಿದ್ದು, ಅಭಿಮಾನಿಗಳತ್ತ ಕೈ ಬೀಸಿ ಮಾತನಾಡಿದ್ದಾರೆ.

 

ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ವೈರಲ್ ಆಗಿದ್ದು, ಬಾಲಿವುಡ್‌ಗೆ ಶಾರುಖ್ ಖಾನ್ ಯಾವಾಗಲೂ ಕಿಂಗ್ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ನವಾಝಿ ಪಠಾಣ್ ಕೆ ಘರ್ ಪರ್, ಮನೆಗೆ ಬಂದ ಎಲ್ಲ ಅತಿಥಿಗಳಿಗೂ ಧನ್ಯವಾದ, ಪ್ರೀತಿ ತುಂಬಿದ ಭಾನುವಾರಕ್ಕಾಗಿ ಧನ್ಯವಾದಗಳು ಎಂದು ಶಾರುಖ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!