ಭಾರತ ಟಿ20 ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡ ಎಂದ ಶಾಹಿದ್‌ ಅಫ್ರೀದಿ!

 ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಶನಿವಾರ ಇಂಗ್ಲೆಂಡ್‌ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟಿ 20 ಪಂದ್ಯದಲ್ಲಿ 49 ರನ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ ತಂಡದ ಪ್ರದರ್ಶನ ಕುರಿತಾಗಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಪ್ರತಿಕ್ರಿಯೆ ನೀಡಿದ್ದು, ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ಕಪ್‌ ಗೆಲ್ಲುವ ನೆಚ್ಚಿನ ತಂಡ ಎಂದು ಬಣ್ಣಿಸಿದ್ದಾರೆ.
ಭಾರತದ ಗೆಲುವಿನ ಬಳಿಕ ಟ್ವೀಟ್ ಮಾಡಿರುವ ಅಫ್ರೀದಿ, “ಭಾರತವು ಅತ್ಯುತ್ತಮ ಕ್ರಿಕೆಟ್ ಆಡಿದ್ದು, ಸರಣಿ ಗೆಲುವಿಗೆ  ಅರ್ಹವಾಗಿದೆ. ತಂಡದ ಬೌಲಿಂಗ್ ಪ್ರದರ್ಶನ ಪ್ರಭಾವಶಾಲಿಯಾಗಿತ್ತು. ಭಾರತವು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಗೆಲ್ಲುವ ಫೇವರೇಟ್‌ ತಂಡಗಳಲ್ಲಿ ಒಂದಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ ರವೀಂದ್ರ ಜಡೇಜಾ ( ಅಜೇಯ 46) ಅಮೋಘ ಆಟದ ಬಲದಿಂದ 171 ರನ್‌ ಗಳ ಗುರಿ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿದ್ದ ಇಂಗ್ಲೆಂಡೆ ಭಾರತದ ಬಿಗಿ ಬೌಲಿಂಗ್‌ ದಾಳಿಗೆ ತತ್ತರಿಸಿ ಕೇವಲ 121 ರನ್‌ ಗಳಿಗೆ ಸರ್ವಪತನ ಕಂಡಿತ್ತು.
ಸಂಕ್ಷಿಪ್ತ ಸ್ಕೋರ್‌:
ಭಾರತ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 170 (ರವೀಂದ್ರ ಜಡೇಜಾ ಔಟಾಗದೆ 46, ರೋಹಿತ್ ಶರ್ಮಾ 31; ಕ್ರಿಸ್ ಜೋರ್ಡಾನ್ 4/27, ರಿಚರ್ಡ್ ಗ್ಲೀಸನ್ 3/15).
ಇಂಗ್ಲೆಂಡ್: 17 ಓವರ್‌ಗಳಲ್ಲಿ 121 ಆಲೌಟ್ (ಮೊಯೀನ್ ಅಲಿ 35; ಡೇವಿಡ್ ವಿಲ್ಲಿ 33; ಭುವನೇಶ್ವರ್ ಕುಮಾರ್ 3/15, ಜಸ್ಪ್ರೀತ್ ಬುಮ್ರಾ 2/10, ಯುಜ್ವೇಂದ್ರ ಚಹಾಲ್ 2/10).

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!