ತೆಲುಗಿನ ಈ ಸೂಪರ್ ಹಿಟ್ ಸಿನಿಮಾ ರಿಮೇಕ್ ಮಾಡೋ ಒಲವು ತೋರಿದ್ದಾರೆ ಶಾಹಿದ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲ ಸಮಯ ಸಿನಿಮಾಗಳಿಂದ ದೂರ ಉಳಿದಿದ್ದ ಶಾಹಿದ್ ಕಪೂರ್ ಇದೀಗ ಮತ್ತೆ ಕಂ ಬ್ಯಾಕ್ ಮಾಡಿದ್ದಾರೆ.
ಸ್ವಮೇಕ್ ಸಿನಿಮಾಗಳಿಗಿಂತ ರಿಮೇಕ್ ಸಿನಿಮಾಗಳು ಶಾಹಿದ್‌ಗೆ ಲಕ್ ತಂದುಕೊಟ್ಟಿವೆ. ತೆಲುಗಿನ ಅರ್ಜುನ್ ರೆಡ್ಡಿ ರಿಮೇಕ್ ಕಬೀರ್ ಸಿಂಗ್ ಹಿಂದಿಯಲ್ಲಿ ಭರ್ಜರಿ ಹಿಟ್ ಆಗಿದೆ. ಇನ್ನು ತೆಲುಗಿನ ಜೆರ್ಸಿ ಸಿನಿಮಾದ ರಿಮೇಕ್‌ನಲ್ಲೂ ಶಾಹಿದ್ ಕಪೂರ್ ನಟಿಸಿದ್ದು, ಸದ್ಯವೇ ರಿಲೀಸ್ ಆಗಲಿದೆ.

ಇದೀಗ ಶಾಹಿದ್ ಕಪೂರ್ ಮತ್ತೊಂದು ಸೂಪರ್ ಹಿಟ್ ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರಂತೆ, ಈ ಸಿನಿಮಾ ರಿಮೇಕ್ ಮಾಡೋ ಆಸೆ ಇದೆ ಎಂದು ಹೇಳಿಕೊಂಡಿದ್ದಾರಂತೆ. ಅದೇ ತೆಲುಗಿನ ಶ್ಯಾಮ್ ಸಿಂಗ ರಾಯ್. ನಾನಿ,ಸಾಯಿ ಪಲ್ಲವಿ, ಮಡೋನಾ ಸೆಬಾಸ್ಟಿಯನ್, ಕೃತಿ ಶೆಟ್ಟಿ ಅಭಿನಯದ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿದೆ.
ಈ ಸಿನಿಮಾ ಕಥೆ ಇಷ್ಟಪಟ್ಟು ರಿಮೇಕ್ ಬಗ್ಗೆ ಶಾಹಿದ್ ಒಲವು ತೋರಿಸಿದ್ದು, ಸದ್ಯದಲ್ಲೇ ರಿಮೇಕ್ ಹಕ್ಕು ಯಾರಿಗೆ ಸಿಗಲಿದೆ ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!