Saturday, August 13, 2022

Latest Posts

ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಎಂದಿದ್ದ ನಟ ಶಾರುಖ್ ಖಾನ್ ಗೆ ಬಿಸಿ ಮುಟ್ಟಿಸಿದ ನೆಟ್ಟಿಗರು!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಾಲಿವುಡ್ ನಟ ಶಾರುಖ್ ಖಾನ್ ನಡೆಯನ್ನು ವಿರೋಧಿಸಿ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದು, ಬಾಯ್ಕಾಟ್ ಶಾರುಖ್ ಹ್ಯಾಷ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ.
ಕಳೆದ 5 ವರ್ಷಗಳ ಹಿಂದೆ ಭಾರತೀಯ ಕ್ರಿಕೆಟಿಗರಿಗಿಂತ ಪಾಕ್ ಆಟಗಾರರು ಶ್ರೇಷ್ಠ ಎಂದು ಹೇಳಿದ್ದ ಹೇಳಿಕೆಯನ್ನು ವಿರೋಧಿಸುತ್ತಾ ಪ್ರಾರಂಭವಾದ ವಾಗ್ದಾಳಿ ಈಗ ಟ್ವಿಟರ್ ಟ್ರೆಂಡ್ ಆಗಿದೆ.
ಈ ಹಿಂದೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಜೊತೆಗೆ ಕ್ಲಿಕ್ಕಿಸಿದ ಫೋಟೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ನೀಡಿದ ಹೇಳಿಕೆ, ಕರಣ್ ಜೋಹರ್ ಹಾಗೂ ಜಾಹ್ನವಿ ಚಿತ್ರಕ್ಕೆ ಬೆಂಬಲ ಸೂಚಿಸಿದ ವಿಚಾರಗಳಿಗೆ ನೆಟ್ಟಿಗರು ಗರಂ ಆಗಿದ್ದಾರೆ.
ಇದೇ ವೇಳೆ ಸಾಧ್ವಿ ಪ್ರಾಚಿ ಕೂಡ ಶಾರುಖ್ ವಿರುದ್ಧ ಕಿಡಿಕಾರಿದ್ದು, ಶಾರುಖ್ ಖಾನ್ ಭಾರತದ ಅನ್ನ ತಿನ್ನುತ್ತಿದ್ದಾರೆ ಆದರೆ ಪಾಕಿಸ್ಥಾನದ ಹಾಡು ಹಾಡುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾರುಖ್ ಪರವಾಗಿ ಅಭಿಮಾನಿಗಳು ವಿ ಲವ್ ಶಾರುಖ್ ಖಾನ್ ಹ್ಯಾಷ್ ಟ್ಯಾಗ್ ಟ್ರೆಂಡ್ ಮಾಡುತ್ತಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss