Thursday, June 30, 2022

Latest Posts

ಹುತಾತ್ಮ ಶೈಲೇಂದ್ರ ಪ್ರತಾಪ್‌ ಸಿಂಗ್‌ ರ ತಂಗಿಯ ವಿವಾಹ ನಡೆಸಿಕೊಟ್ಟು ಅಣ್ಣನಿಲ್ಲದ ಕೊರತೆ ನೀಗಿಸಿದ ಯೋಧರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪುಲ್ವಾಮಾದಲ್ಲಿ ನಡೆದ ಬಾಂಬ್‌ ದಾಳಿಯಲ್ಲಿ ಹುತಾತ್ಮರಾದ ಯೋಧ ಶೈಲೇಂದ್ರ ಪ್ರತಾಪ್‌ ಸಿಂಗ್‌ ಅವರ ಸಹೋದರಿಯ ಮದುವೆಯನ್ನು ಖುದ್ದು ಸಿಆರ್‌ಪಿಎಫ್‌ ಯೋಧರೇ ಮುಂದೆ ನಿಂತು ನಡೆಸಿಕೊಟ್ಟ ಭಾವನಾತ್ಮಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದ ರಾಯ್ ರೇಲಿಯಲ್ಲಿನಾ ಹುತಾತ್ಮ ಶೈಲೇಂದ್ರ ಪ್ರತಾಪ್‌ ಸಿಂಗ್‌ ಅವರ ನಿವಾಸಕ್ಕೆ ಆಗಮಿಸಿದ ಯೋಧರು ಸಹೋದರಿ ಜ್ಯೋತಿ ಅವರ ಮದುವೆಯನ್ನು ತಾವೇ ಮುಂದೆ ನಿಂತು ಸಂಭ್ರಮದಲ್ಲಿ ನಡೆಸಿಕೊಟ್ಟರು.
ಆಕೆಯ ಅಣ್ಣನ ಸ್ಥಾನವನ್ನು ತುಂಬಿ ಮದುವೆ ಮನೆಗೆ ಮುಂಚೆಯೇ ಬಂದಿದ್ದ ಯೋಧರು ಎಲ್ಲಾ ಕಾರ್ಯಗಳ ಜವಾಬ್ದಾರಿ ವಹಿಸಿಕೊಂಡರು.ವಧುವನ್ನು ಮಂಟಪಕ್ಕೆ ಕರೆತರುವ ಮೂಲಕ ಸಹೋದರನನ್ನು ಕಳೆದುಕೊಂಡಿರುವ ಭಾವನೆ ಈ ಮದುಮಗಳಿಗೆ ಬರದಂತೆ ನೋಡಿಕೊಂಡರು.
ಈ ಸಂಭ್ರಮದ ಪೋಟೊವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ ಸಿಆರ್‌ಪಿಎಫ್‌, ‘ಹುತಾತ್ಮ ಯೋಧ ಶೈಲೇಂದ್ರ ಪ್ರತಾಪ್‌ ಸಿಂಗ್‌ ಅವರ ಸಹೋದರಿಯ ವಿವಾಹ ಕಾರ್ಯಕ್ರಮದಲ್ಲಿ ಹಿರಿಯ ಸಹೋದರರಾಗಿ ಸಿಆರ್‌ಪಿಎಫ್‌ ಯೋಧರು ಪಾಲ್ಗೊಂಡಿದ್ದರು’ ಎಂದು ಬರೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss