Monday, December 11, 2023

Latest Posts

ಸುಕೃತ ನಾಗ್ ಜೊತೆ ಶೈನ್ ಶೆಟ್ಟಿ ಮದುವೆ?: ಈ ಕುರಿತು ನಟ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಬಿಗ್ ಬಾಸ್ ಸೀಸನ್ 7ರ ವಿನ್ನರ್ ಆಗಿದ್ದ ಶೈನ್ ಶೆಟ್ಟಿ ಇತ್ತೀಚೆಗೆ ಕಾಂತಾರ ಸಿನಿಮಾದಲ್ಲಿನ ನಟನೆ ಮೂಲಕ ಸುದ್ದಿಯಲ್ಲಿದ್ದರು. ಇದೀಗ ಮತ್ತೆ ಸುಕೃತ ನಾಗ್ ಜೊತೆಗಿನ ಮದುವೆಯ ಬಗ್ಗೆ ಚರ್ಚೆಯಲ್ಲಿದ್ದಾರೆ . ಇದೀಗ ಈ ಮದುವೆಯ ವದಂತಿಯ ಬಗ್ಗೆ ಶೈನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಜೇಮ್ಸ್, ಕಾಂತಾರ ಚಿತ್ರದ ನಂತರ ಸಿನಿಮಾಗಳಲ್ಲಿ ಆಕ್ಟೀವ್ ಆಗಿರುವ ಶೈನ್ ಹೆಸರು ಸುಕೃತ ನಾಗ್ ಜೊತೆ ಕೇಳಿ ಬರುತ್ತಿದೆ. `ಲಕ್ಷಣ’ ನಟಿ ಸುಕೃತ ಜೊತೆ ಶೈನ್ ಶೆಟ್ಟಿ ಮದುವೆ ಅಂತಾ ಸುದ್ದಿ ಸದ್ದು ಮಾಡುತ್ತಿದೆ.

ಇದೀಗ ಈ ಕುರಿತು ಸ್ಪಷ್ಟನೆ ನೀಡಿದ ಶೈನ್ , ಕಲಾವಿದರು ಆಗಿರುವ ಕಾರಣ ನನಗೂ ಸುಕೃತ ಅವರಿಗೂ ಪರಿಚಯವಿದೆ ಆದರೆ ಯಾವುದೇ ರೀತಿಯ ಸಂಪರ್ಕವಿಲ್ಲ. ನಾವು ಇದುವರೆಗೂ ಭೇಟಿಯಾಗಿಲ್ಲ. ಯಾವುದೇ ಮಾತುಕತೆಯಿಲ್ಲ. ಈ ಮದುವೆ ಸುದ್ದಿ ಎಲ್ಲಾ ಸುಳ್ಳು, ಆ ತರಹ ಏನು ವಿಚಾರವಿಲ್ಲ ಎಂದಿದ್ದಾರೆ. ದಯವಿಟ್ಟು ಈ ರೀತಿಯ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ, ಮತ್ತು ಇದನ್ನೂ ಯಾರು ನಂಬಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ.

ನಾನು ನನ್ನ ಕೆರಿಯರ್‌ನತ್ತ ಗಮನ ಹರಿಸುತ್ತಿದ್ದೇನೆ. ಮದುವೆಯ ಬಗ್ಗೆ ನಾನು ಆಲೋಚನೆ ಮಾಡಿಲ್ಲ. ಈ ಮೂಲಕ ಸುಕೃತ ನಾಗ್ ಜೊತೆಗಿನ ಮದುವೆ ವದಂತಿಗೆ ಶೈನ್ ಬ್ರೇಕ್ ಹಾಕಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!