Wednesday, August 17, 2022

Latest Posts

ಶಂಕರ್ ಬಿದರಿ ಅವರ ಇ-ಮೇಲ್ ಹ್ಯಾಕ್: ಮೂವರು ಆರೋಪಿಗಳ ಬಂಧನ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರ ಇ-ಮೇಲ್ ಹ್ಯಾಕ್ ಮಾಡಿ ಅವರ ಆಪ್ತರಿಂದ ಹಣ ವಸೂಲಿ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ನಾಗಾಲ್ಯಾಂಡ್ ಮೂಲದ ಥಿಯಾ,ಸೆರೋಸಾ ಹಾಗೂ ಇಸ್ಟರ್ ಕೊನ್ಯಾಕ್ ಅಲಿಯಾಸ್ ರುಚಿಕಾ.
ಈ ಮೂವರು ಸೇರಿ ಬಿದರಿ ಅವರ ಇ-ಮೇಲ್ ಹ್ಯಾಕ್ ಮಾಡಿ ಅವರ ಆಪ್ತರಿಗೆ ನನಗೆ 25 ಸಾವಿರ ರೂ. ಹಣ ಬೇಕು. ನಾಳೆಯೇ ವಾಪಾಸ್ ಮಾಡುತ್ತೇನೆ ಎಂದು ಫೋನ್ ನಂಬರ್ ಕಳಿಸಿದ್ದರು. ಬಿದರಿ ಅವರನ್ನು ನಂಬಿ ಅವರ ಆಪ್ತರೊಬ್ಬರು ಹಣ ನೀಡಿದ್ದಾರೆ. ನಂತರ ಬಿದರಿ ಅವರ ನಂಬರ್‌ಗೆ ಕರೆ ಮಾಡಿದಾಗ ಇದು ಸೈಬರ್ ಕಳ್ಳರ ಕೆಲಸ ಎನ್ನುವುದು ತಿಳಿದಿದೆ.
ಮೊದಲು ರುಚಿಕಾಳನ್ನು ಬಂಧಿಸಲಾಗಿದ್ದು, ನಂತರ ಇನ್ನುಳಿದ ಆರೋಪಿಗಳನ್ನು ಬಂಧಿಸಲಾಗಿದೆ. ಈಕೆ ನಾಲ್ಕು ವರ್ಷದ ಹಿಂದೆ ಸೇಲ್ಸ್ ಗರ್ಲ್ ಆಗಿ ಸೇರಿಕೊಂಡಿದ್ದಳು. ಈ ವೇಳೆ ಸೈಬರ್ ವಂಚಕರಾದ ಪೀಟರ್ ಮತ್ತು ಜೇಮ್ಸ್‌ನ ಸ್ನೇಹ ಬೆಳೆಸಿದ್ದಳು. ಈ ಮೂವರು ಸೇರಿ ಯೋಜನೆ ರೂಪಿಸಿದ್ದಾರೆ. ಸಾರ್ವಜನಿಕರ ಸಾಮಾಜಿಕ ಜಾಲತಾಣಗಳನ್ನು ಹ್ಯಾಕ್‌ಮಾಡಿ ಜನರಿಂದ ಹಣ ಕೀಳುತ್ತಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!